Breaking News

ಪರೀಕ್ಷಾ ಅಕ್ರಮ: ಆರ್‌.ಡಿ.ಪಾಟೀಲ್ ಸೇರಿ 12 ಆರೋಪಿಗಳ ಮೇಲೆ ಕೋಕಾ ಆಯಕ್ಟ್‌ನಡಿ ಪ್ರಕರಣ

Spread the love

ಕಲಬುರಗಿ: ಪಿಎಸ್‌ಐ ನೇಮಕಾತಿ‌ ಪರೀಕ್ಷೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ಎಸಗಿದ ಪ್ರಮುಖ ಆರೋಪಿ ಆರ್‌.ಡಿ.ಪಾಟೀಲ್ ಸೇರಿ 12 ಜನ ಆರೋಪಿಗಳ ಮೇಲೆ ಕೋಕಾ ಆಯಕ್ಟ್ ಜಾರಿಗೊಳಿಸಲಾಗಿದೆ.

ಪದೇ ಪದೇ ಒಂದೇ ರೀತಿಯ ಅಪರಾಧ ಕೃತ್ಯ ಮುಂದುವರೆಸುವವರ ವಿರುದ್ದ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ) ಕೋಕಾ ಅಸ್ತ್ರ ಪ್ರಯೋಗಿಸಲಾಗುತ್ತದೆ.‌ ಅಶೋಕ ನಗರ ಠಾಣೆ ವ್ಯಾಪ್ತಿಯ ಖಾಸಗಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿದ ಸಂಬಂಧ ಪರೀಕ್ಷಾ ಅಭ್ಯರ್ಥಿಗಳು ಸೇರಿ 15 ಜನರ ವಿರುದ್ದ ಪ್ರಕರಣ ದಾಖಲಾಗಿತ್ತು. ಮೂವರು ಅಭ್ಯರ್ಥಿಗಳನ್ನು ಬಿಟ್ಟು ಸಿಐಡಿ ಪೊಲೀಸರು ಹನ್ನೆರಡು ಆರೋಪಿಗಳ ವಿರುದ್ಧ ಕೋಕಾ ಆಯಕ್ಟ್‌ನಡಿ ಪ್ರಕರಣ ದಾಖಲಿಸಿದ್ದಾರೆ.

ಕಿಂಗ್​ಪಿನ್‌ ಆರ್.ಡಿ.ಪಾಟೀಲ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಗಾಗಿ ಪ್ರಾಂಶುಪಾಲರನ್ನು ಭೇಟಿ ಮಾಡಿದ್ದ ಸಂತೋಷ ಕಟ್ಟೋಳಿ, ಡೀಲ್ ಮಾಡಿಕೊಂಡ ಅಭ್ಯರ್ಥಿಗಳ ಪಟ್ಟಿ ಮಾಡುತ್ತಿದ್ದ ಶಶಿಧರ ಜಮಾದಾರ, ಬ್ಲೂಟೂತ್ ಡಿವೈಸ್ ತರಿಸಿಕೊಂಡು ಅಭ್ಯರ್ಥಿಗಳಿಗೆ ಪೂರೈಸುತ್ತಿದ್ದ ಸಾಗರ್, ಜೇವರ್ಗಿ ತಾಲೂಕು ನೆಲೋಗಿ ಮೂಲದ ಬೆಳಗಾವಿ ಜಿಲ್ಲೆ ಅಥಣಿಯ ಸಣ್ಣ ನೀರಾವರಿ ಇಲಾಖೆಯ ಎಇ ಆಗಿದ್ದ ರುದ್ರಗೌಡ, ರಾಯಲ್‌ ಪಬ್ಲಿಕ್ ಶಾಲಾ ಕೇಂದ್ರದ ಮುಖ್ಯಸ್ಥನಾಗಿದ್ದ ಚಂದ್ರಕಾಂತ ಬುರಕಲ್, ಕಸ್ಟೋಡಿಯನ್ ಬಸಣ್ಣ ಪೂಜಾರಿ, ಶಿವಕುಮಾರ್, ಸಿದ್ರಾಮ ಕೋಳಿ, ರವಿಕುಮಾರ್, ರಹೀಂ ಚೌಧರಿ, ಬಸವರಾಜ ಎಳವಾರ ವಿರುದ್ಧ ಕೋಕಾ ಜಾರಿ ಮಾಡಲಾಗಿದೆ.

ಕೋಕಾ ಜಾರಿ ಮಾಡಿ ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಇದರಿಂದಾಗಿ ಆರ್.ಡಿ.ಪಾಟೀಲ್ ಸೇರಿ ಹನ್ನೆರಡು ಆರೋಪಿಗಳಿಗೆ ಜಾಮೀನು ಸಿಗುವುದು ಬಹಳ ದುರ್ಲಭವಾಗುತ್ತದೆ. ಈ ಕಾಯ್ದೆ ಅಡಿ ಆರೋಪ ಸಾಬೀತಾದರೆ ಐದು ವರ್ಷದಿಂದ ಜೀವಾವಧಿ ಶಿಕ್ಷೆವರೆಗೆ ಶಿಕ್ಷೆಯಾಗುವ ಸಾಧ್ಯತೆ ಕೂಡಾ ಇದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ