ಬೆಳಗಾವಿ ರಾಜ್ಯದ ಎರಡನೇ ರಾಜಧಾನಿ ಎಂದು ಕರೆಸಿಕೊಳ್ಳುತ್ತದೆ. ದಿನ ದಿನಕ್ಕೆ ಕುಂದಾನಗರಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಆದರೆ, ಅದಕ್ಕೆ ತಕ್ಕುದಾಗಿ ಬೃಹತ್ ಕೈಗಾರಿಕೆಗಳು ಇಲ್ಲಿಲ್ಲ. ಪರಿಣಾಮ ಜಿಲ್ಲೆಯ ಯುವಕರು ಉದ್ಯೋಗ ಅರಸಿ ಬೆಂಗಳೂರು, ಮುಂಬೈ, ಪುಣೆ ಸೇರಿ ಇನ್ನಿತರ ಕಡೆ ವಲಸೆ ಹೋಗುವ ದುಸ್ಥಿತಿಯಿದೆ. ಹಾಗಾಗಿ, ಬೆಳಗಾವಿಯಲ್ಲಿ ಬೃಹತ್ ಕೈಗಾರಿಕೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಫೌಂಡ್ರಿ ಪಾರ್ಕ್ ನಿರ್ಮಿಸುವಂತೆ ಆಗ್ರಹಿಸಿದ್ದ ಈ ಭಾಗದ ಉದ್ಯಮಿಗಳಿಗೆ ಸಾಥ್ ಕೊಟ್ಟಿತ್ತು.
ಫೈವ್ ಸ್ಟಾರ್ ಇಂಡಸ್ಟ್ರೀಸ್ ಎಸ್ಟೇಟ್: ಚಳಿಗಾಲ ಅಧಿವೇಶನಕ್ಕೂ ಮುನ್ನ ವಿಸ್ತ್ರತ ವರದಿ ಕೂಡ ಪ್ರಸಾರ ಮಾಡಿತ್ತು. ಆ ವರದಿ ಸರ್ಕಾರದ ಗಮನ ಸೆಳೆದಿದ್ದು, ಅಧಿವೇಶನದ ಕೊನೆಯ ದಿನ ಸಿಎಂ ಸಿದ್ದರಾಮಯ್ಯ ಬೆಳಗಾವಿ ಜಿಲ್ಲೆಯಲ್ಲಿ 2 ಸಾವಿರ ಎಕರೆ ಪ್ರದೇಶದಲ್ಲಿ ಫೈವ್ ಸ್ಟಾರ್ ಇಂಡಸ್ಟ್ರೀಸ್ ಎಸ್ಟೇಟ್ ಹಾಗೂ 500 ಎಕರೆಯಲ್ಲಿ ಫೌಂಡರಿ ಪಾರ್ಕ್ ಸ್ಥಾಪಿಸುವ ಬಗ್ಗೆ ಘೋಷಿಸಿದ್ದಾರೆ. ಇದಕ್ಕೆ ಉದ್ಯಮಿಗಳು ಹರ್ಷ ವ್ಯಕ್ತಪಡಿಸಿದರು.