Breaking News

ಸಂಸತ್ ಭದ್ರತಾ ಲೋಪ ಪ್ರಕರಣಮನೋರಂಜನ್ ಕುಟುಂಬದ ವಿಚಾರಣೆ

Spread the love

ಸಂಸತ್ ಭದ್ರತಾ ಲೋಪ ಪ್ರಕರಣದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮತ್ತು ಗುಪ್ತಚರ ದಳದ ನಾಲ್ವರು ಅಧಿಕಾರಿಗಳ ತಂಡ ಸೋಮವಾರ ಮೈಸೂರಿನ ಮನೋರಂಜನ್ ಅವರ ಮನೆಯಲ್ಲಿ ಸುಮಾರು ಏಳು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದೆ.
ಮೈಸೂರು: ಸಂಸತ್ ಭದ್ರತಾ ಲೋಪ ಪ್ರಕರಣದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮತ್ತು ಗುಪ್ತಚರ ದಳದ ನಾಲ್ವರು ಅಧಿಕಾರಿಗಳ ತಂಡ ಸೋಮವಾರ ಮೈಸೂರಿನ ಮನೋರಂಜನ್ ಅವರ ಮನೆಯಲ್ಲಿ ಸುಮಾರು ಏಳು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದೆ.
ಸೋಮವಾರ ಬೆಳ್ಳಿಗೆ 11 ಗಂಟೆ ಸುಮಾರಿಗೆ ಮನೋರಂಜನ್ ಮನೆಗೆ ಆಗಮಿಸಿದ ಪೊಲೀಸರು ವಿಜಯನಗರದಲ್ಲಿರುವ ಆತನ ತಾಯಿ ಶೈಜಲಾ ಮತ್ತು ತಂದೆ ದೇವರಾಜಗೌಡ ಅವರನ್ನು ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ.
ಎರಡನೇ ಮಹಡಿಯಲ್ಲಿದ್ದ ಮನೋರಂಜನ್ ಅವರ ಕೊಠಡಿಯನ್ನು ತೆರೆದಾಗ ಪುಸ್ತಕಗಳು ಮತ್ತು ಇತರ ವಸ್ತುಗಳ ಸಂಗ್ರಹವನ್ನು ನೋಡಿದ್ದಾರೆ. ಅವರ ತಂದೆ ದೇವರಾಜಗೌಡ ಅವರನ್ನು ಒಂದು ಗಂಟೆಗೂ ಹೆಚ್ಚು ಕಾಲ ಪ್ರತ್ಯೇಕವಾಗಿ ಮತ್ತು ಕುಟುಂಬ ಸದಸ್ಯರೊಂದಿಗೂ ವಿಚಾರಣೆ ನಡೆಸಿದ್ದಾರೆ. ಮನೋರಂಜನ್ ಅವರ ದಿನಚರಿ, ಚಲನವಲನಗಳು, ಸ್ನೇಹಿತರು ಮತ್ತು ಬೆಂಗಳೂರು ಮತ್ತು ಇತರ ನಗರಗಳಿಗೆ ಇತ್ತೀಚಿನ ಭೇಟಿಗಳ ಮೇಲೆ ಮಾಹಿತಿ ಕಲೆ ಹಾಕಿದ್ದಾರೆ.

Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ