Breaking News

ರಾಜ್ಯಸಭೆಯಿಂದ ಟಿಎಂಸಿ ಸಂಸದ ಅಮಾನತು

Spread the love

ವದೆಹಲಿ: ರಾಜ್ಯಸಭೆಯಲ್ಲಿ ಅಶಿಸ್ತಿನ ನಡುವಳಿಕೆ ತೋರಿದ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಅವರನ್ನು ಗುರುವಾರ ಅಧಿವೇಶನದ ಇನ್ನುಳಿದ ಅವಧಿ ವರೆಗೆ ಅಮಾನತು ಮಾಡಲಾಯಿತು.

ಗುರುವಾರ ಕಲಾಪ ಶುರುವಾಗುತ್ತಿದ್ದಂತೆ ನಿನ್ನೆ ನಡೆದ ಸಂಸತ್‌ ಭದ್ರತಾ ಲೋಪದ ಕುರಿತು ಚರ್ಚಿಸುವಂತೆ ಪಟ್ಟು ಹಿಡಿದ ಡೆರೆಕ್‌ ಒಬ್ರಿಯಾನ್‌ ದುರ್ವರ್ತನೆ ತೋರುವ ಮೂಲಕ ಸದನಕ್ಕೆ ಅಗೌರವ ತೋರಿದರು.

ಈ ಹಿನ್ನೆಲೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್‌, ಒಬ್ರಿಯಾನ್‌ಗೆ ಸದನದಿಂದ ಹೊರಗೆ ಹೋಗುವಂತೆ ಸೂಚಿಸಿದರು. ಡೆರೆಕ್ ಒ’ಬ್ರೇನ್ ಅವರು ಅಧ್ಯಕ್ಷರನ್ನು ಧಿಕ್ಕರಿಸುವುದಾಗಿ ಹೇಳಿದರು. ಇದರಿಂದ ಕೋಪಗೊಂಡ ಧನಕರ್‌, ಒಬ್ರಿಯಾನ್ ಸದನದ ನಿಯಮಗಳನ್ನು ಗೌರವಿಸುವುದಿಲ್ಲ. ಇದೊಂದು ಗಂಭೀರ ದುರ್ನಡತೆ. ಇದು ನಾಚಿಕೆಗೇಡಿನ ಘಟನೆಯಾಗಿದೆ ಎಂದು ಅಕ್ರೋಶ ಹೊರಹಾಕಿ, ಅಮಾನತು ಮಾಡಿದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ