Breaking News

ಕೇಂದ್ರದ ಗೃಹ ಸಚಿವ ಹಾಗೂ ಪ್ರಧಾನಿ ಮೋದಿ ಪಾರ್ಲಿಮೆಂಟ್​ನಲ್ಲಿ ಆಗಿರುವ ಭದ್ರತಾ ಲೋಪದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಆಶ್ಚರ್ಯ

Spread the love

ಬೆಳಗಾವಿ: ಸಂಸತ್ತಿನ ಇತಿಹಾಸದಲ್ಲಿ ಆಗದೇ ಇರುವ ಭದ್ರತಾ ಲೋಪವನ್ನು ಇಡೀ ವಿಶ್ವವೇ ನೋಡಿದೆ. ಈ ಬಗ್ಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಹೇಳಿಕೆ ನೀಡದೇ ಇರುವುದು ಆಶ್ಚರ್ಯವಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್​ ಕಿಡಿಕಾರಿದ್ದಾರೆ.

ಇಂದು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಹೊಸದಾಗಿ ಸಂಸತ್ ನಿರ್ಮಿಸಿದ್ದೇವೆ. ವ್ಯವಸ್ಥಿತ ಹಾಗೂ ವೈಜ್ಞಾನಿಕವಾಗಿ ಮಾಡಿದ್ದೇವೆ ಎಂದು ಹೇಳುವಾಗ ಇಬ್ಬರು ಯುವಕರು ಗ್ಯಾಲರಿಗೆ ಬಂದು, ಅಲ್ಲಿಂದ ಜಿಗಿದು ನೇರವಾಗಿ ಸದನದ ಒಳಗೆ ಬರುತ್ತಾರೆ ಎಂದರೆ ಹೇಗೆ..? ಯಾರೂ ನಂಬಲು ಸಾಧ್ಯವಿಲ್ಲ. ವಿಶೇಷವಾಗಿ ನಮ್ಮ ರಾಜ್ಯದ ಸಂಸದರಾದ ಪ್ರತಾಪ್ ಸಿಂಹ್ ಪಾಸ್​ಗಳನ್ನು ಕೊಟ್ಟಿದಾರೆ ಎಂದು ಗೊತ್ತಾಗಿದೆ. ಅವರಿಗೆ ಪರಿಚಯ ಇದ್ದ ಯುವಕರಿಗೆ ಪಾಸ್​ಗಳನ್ನು ಕೊಟ್ಟಿದ್ದಾರೆ. ಹೀಗಾಗಿ ಅವರೂ ಸಹ ಇದಕ್ಕೆ ಹೊಣೆಯಾಗುತ್ತಾರೆ. ಅವರನ್ನೂ‌ ಕೂಡ ಸಂಸತ್ ಸ್ಥಾನದಿಂದ‌ ಅಮಾನತು ಮಾಡುವಂತೆ ನಮ್ಮ ಕಾಂಗ್ರೆಸ್ ಪಕ್ಷ ಹಾಗೂ ಬೇರೆ ಪಕ್ಷದವರೂ ಆಗ್ರಹಿಸಿದ್ದಾರೆ” ಎಂದರು.


Spread the love

About Laxminews 24x7

Check Also

ಅಡಿಕೆ ಸಾಗಿಸುತ್ತಿದ್ದ VRL ಲಾರಿ ತೋಟಕ್ಕೆ ಉರುಳಿ ಸಂಪೂರ್ಣ ಜಖಂ!

Spread the loveಶಿರಸಿ:ಶಿರಸಿಯಿಂದ ಹುಬ್ಬಳ್ಳಿಗೆ ಅಡಿಕೆ ಸಾಗಿಸುತ್ತಿದ್ದ VRL ಸಂಸ್ಥೆಗೆ ಸೇರಿದ ಲಾರಿಯೊಂದು ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ