ಬೆಳಗಾವಿ: ರಾಜ್ಯದ ಪ್ರಾಥಮಿಕ ಹಾಗು ಪ್ರೌಢಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್ ಯೋಜನೆಯಡಿ ಮುಂದಿನ ವರ್ಷದಿಂದ ಸೈಕಲ್ ವಿತರಣೆ ಆರಂಭಿಸಲಾಗುತ್ತದೆ.
ಆದರೆ, ಈ ಬಾರಿ ಸೈಕಲ್ ವಿತರಣೆ ಅಸಾಧ್ಯ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಕ್ಕಳಿಗೆ ಸೈಕಲ್ ಕೊಡಬಾರದಂತಲ್ಲ, ಇದಕ್ಕೆ ನಮಗೆ ಹಣಕಾಸು ಸಮಸ್ಯೆಯೂ ಆಗುವುದಿಲ್ಲ. ಆದರೆ, ಒಂದೇ ಬಾರಿ ಅಷ್ಟು ಸೈಕಲ್ಗಳ ಉತ್ಪಾದನೆ ಕಷ್ಟವಾಗಲಿದೆ. ಹಾಗಾಗಿ ಈ ಬಾರಿ ಮೊಟ್ಟೆ ವಿತರಣೆಗೆ ಆದ್ಯತೆ ನೀಡಲಾಗುತ್ತದೆ. ನಾವು ಬೇಡಿ ನೀಡಿದ ಕಡೆಯಲ್ಲೆಲ್ಲಾ ಮಕ್ಕಳು ಸೈಕಲ್ ಕೇಳಿದ್ದಾರೆ. ಹಣದ ಕೊರತೆ ಆಗಲ್ಲ. ಮುಂದಿನ ವರ್ಷದಿಂದ ಸೈಕಲ್ ಕೊಡಲಿದ್ದೇವೆ ಎಂದು ಭರವಸೆ ನೀಡಿದರು.