ಸಿಡಿಎಸ್ ಬಿಪಿನ್ ರಾವತ್ ವೀರಮರಣವನ್ನಪ್ಪಿ ಇಂದಿಗೆ 2 ವರ್ಷ. ಅಂದು ನಡೆದ ದುರಂತದಲ್ಲಿ ನಂಜಪ್ಪ ಛತ್ರಂ ಗ್ರಾಮದ ಜನರು ಮೆರೆದ ಮಾನವೀಯತೆ ಗಮನ ಸೆಳೆದಿದೆ. ಈ ಗ್ರಾಮದಲೀಗ ಸಿಡಿಎಸ್ ರಾವತ್ ಸೇರಿ ಮಡಿದವರ ಸ್ಮಾರಕ ಎದ್ದು ನಿಂತಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ಕೊಯಮತ್ತೂರು (ತಮಿಳುನಾಡು): ಡಿಸೆಂಬರ್ 8, 2021.. ದೇಶಕ್ಕೆ ದೇಶವೇ ಮೌನಕ್ಕೆ ಜಾರಿದ ದಿನ. ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿದಂತೆ 14 ಜನರು ಕೊಯಮತ್ತೂರಿನ ಸೂಲೂರ್ ಏರ್ ಫೋರ್ಸ್ ಬೇಸ್‌ನಿಂದ ನೀಲಗಿರಿ ಜಿಲ್ಲಾ ವೆಲ್ಲಿಂಗ್ಟನ್ ಸೇನಾ ತರಬೇತಿ ಕೇಂದ್ರಕ್ಕೆ ತೆರಳಿದ್ದರು. ಈ ವೇಳೆ ಉಂಟಾದ ಹವಾಮಾನ ವೈಪರೀತ್ಯ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ನೀಲಗಿರಿ ಜಿಲ್ಲೆಯ ಕುನ್ನೂರು ಸಮೀಪದ ನಂಜಪ್ಪ ಛತ್ರಂ ಗ್ರಾಮದ ಬಳಿ ಹೆಲಿಕಾಪ್ಟರ್ ಮರಕ್ಕೆ ಡಿಕ್ಕಿ ಹೊಡೆದು ಮಹಾ ದುರಂತವೊಂದು ಸಂಭವಿಸಿತ್ತು. ಪರಿಣಾಮ ಇಡೀ ದೇಶವೇ ದುಃಖಕ್ಕೆ ಜಾರುವಂತೆ ಮಾಡಿತ್ತು