ಬೆಳಗಾವಿ : ಮುಸ್ಲಿಂ ಸಮಾವೇಶದಲ್ಲಿ ಐಸಿಸ್(ISIS) ಸಂಪರ್ಕ ಹೊಂದಿರುವ , ಇಸ್ಲಾಂ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ವ್ಯಕ್ತಿ ಭಾಗಿಯಾಗಿದ್ದ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagowda patil yatnal) ಆರೋಪ ಮಾಡಿದ್ದರು. ಈ ಬಗ್ಗೆ ಸುವರ್ಣ ವಿಧಾನಸೌಧದ ಎದುರು ಮತ್ತಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ವಿಜಯಪುರದಲ್ಲಿರುವ ದರ್ಗಾಗಳಲ್ಲಿ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕವಿರುವ ಮೌಲ್ವಿಗಳಿದ್ದಾರೆ . ಮುಸ್ಲಿಂ ಸಮಾವೇಶದಲ್ಲಿ ಭಾಗಿಯಾಗಿದ್ದ ಒಬ್ಬ ಕಳೆದ 25 ವರ್ಷಗಳಿಂದ ವಿಜಯಪುರದಲ್ಲಿ ನೆಲೆಸಿದ್ದಾನೆ ಆತನಿಗೆ ಐಸಿಸ್ ಸಂಪರ್ಕವಿದೆ, ಇಸ್ಲಾಂ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದಾನೆ ಎಂದು ಶಾಸಕ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ. ಈ ವ್ಯಕ್ತಿಯ ಮೊಬೈಲ್, ಇವರ ಬೇರೆ ಬೇರೆ ದೇಶಗಳ ಓಡಾಟ, ಹಣದ ವ್ಯವಹಾರ ತನಿಖೆಗೆ ಒಳಪಡಿಸಿದರೆ ಎಲ್ಲಾ ಮಾಹಿತಿ ಸಿಗುತ್ತದೆ, ದೇಶದ ಹಿತದೃಷ್ಟಿಯಿಂದ ಎನ್‌ಐಎ ತನಿಖೆಗೆ ಒಳಪಡಿಸಿ ಎಂದು ಯತ್ನಾಳ್ ಹೇಳಿದ್ದಾರೆ.
ಬಿಜೆಪಿ ಸರ್ಕಾರವನ್ನು ಟೀಕಿಸಿದ ಯತ್ನಾಳ್ಮುಸ್ಲಿಂ ಸಮಾವೇಶದ ಬಗ್ಗೆ ಮಾತನಾಡುತ್ತಾ ಶಾಸಕ ಯತ್ನಾಳ್ ಹಿಂದಿನ ಬಿಜೆಪಿ ಸರ್ಕಾರದ ಆಡಳಿತ ವೈಖರಿಯನ್ನೂ ಟೀಕಿಸಿದ್ದಾರೆ. ಶಿವಮೊಗ್ಗ ಗಲಾಟೆಯಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆಯಾದಾಗ ನಮ್ಮದೇ ಸರ್ಕಾರ ಏನೂ ಮಾಡ್ಲಿಲ್ಲ, ಹುಬ್ಬಳ್ಲಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದಾಗ, ಕೆಜೆ ಹಳ್ಳಿ ಡಿಜೆ ಹಳ್ಳಿ ಪ್ರಕರಣದಲ್ಲಿ ಬಿಜೆಪಿ ಅಸಡ್ಡೆ ಭಾವ ತೋರಿಸಿದೆ, ಬಿಜೆಪಿ ಚೆನ್ನಾಘಿ ಕೆಲಸ ಮಾಡಿದ್ದರೆ 130 ಸೀಟ್ ಬರ್ತಿತ್ತು ಎಂದು ಯತ್ನಾಳ್ ಹೇಳಿದರು.