Breaking News

ರಾಜ್ಯದಲ್ಲಿರುವ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರ ವೇತನ ತಾರತಮ್ಯ ನಿವಾರಣೆ ಮಾಡಬೇಕು

Spread the love

ಬೆಳಗಾವಿ: ರಾಜ್ಯದಲ್ಲಿರುವ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರ ವೇತನ ತಾರತಮ್ಯ ನಿವಾರಣೆ ಮಾಡಬೇಕು, ಎಲ್ಲ ಸರ್ಕಾರಿ ಶಾಲೆಗಳ ಮಾದರಿಯಲ್ಲಿ ತಮ್ಮನ್ನೂ ಪರಿಗಣಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ವಿಶೇಷ ಶಾಲೆಗಳ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿ, ಸಮೀಪದ ಸುವರ್ಣ ವಿಧಾನಸೌಧದ ಬಳಿ ಸೋಮವಾರ ಧರಣಿ ನಡೆಸಿದರು.

 

ರಾಜ್ಯದಲ್ಲಿ 34 ಅನುದಾನಿತ ಶಾಲೆಗಳು, 136 ಶಾಲೆಗಳು ಶಿಶುಕೇಂದ್ರಿದ ಎಂಬ ಅವೈಜ್ಞಾನಿಕ ಯೋಜನೆ ಅಡಿ ಇವೆ. 1982ರ ಅಧಿನಿಯಮದ ಪ್ರಕಾರ ಇರುವ 34 ಅನುದಾನಿತ ಶಾಲೆಗಳಲ್ಲಿ 6ನೇ ವೇತನ ಆಯೋಗ ಜಾರಿ ಮಾಡಲಾಗಿದೆ. ಆದರೆ, 136 ಶಾಲೆಗಳ ಶಿಕ್ಷಕರಿಗೆ ಈಗಲೂ ₹20 ಸಾವಿರಕ್ಕಿಂತ ಕಡಿಮೆ ಗೌರವ ಧನ ನೀಡಲಾಗುತ್ತಿದೆ. ಈ ಎರಡೂ ಮಾದರಿಯ ಶಾಲೆಗಳು ಒಂದೇ ರೀತಿ ಇವೆ. ಶಿಕ್ಷಕರ ಪದವಿ ಕೂಡ ಒಂದೇ ಆಗಿದೆ. ಆದರೂ ತಾರತಮ್ಯ ನಿವಾರಿಸಿಲ್ಲ ಎಂದು ಹರಿಹಾಯ್ದರು.

ವೇತನ ತಾರತಮ್ಯ ನಿವಾರಣೆಗೆ ದಶಕಗಳಿಂದಲೂ ಹೋರಾಟ ಮಾಡಲಾಗುತ್ತಿದೆ. ಕೆಲವರು 30 ವರ್ಷಗಳಿಂದಲೂ ಇದೇ ಶಾಲೆಗಳಲ್ಲಿ ದುಡಿಯುತ್ತಿದ್ದಾರೆ. ಅವರಿಗೂ ಕನಿಷ್ಠ ಸಂಬಳ ಇಲ್ಲ. ಸಮಾನ್ಯ ಮಕ್ಕಳಿಗೆ ಕಲಿಸುವುದಕ್ಕಿಂತ ವಿಶೇಷ ಚೇತನ ಮಕ್ಕಳಿಗೆ ಕಲಿಸುವುದು ಸವಾಲಿನ ಕೆಲಸ. ಅವರನ್ನು ಮುಖ್ಯವಾಹಿನಿಗೆ ತರಲು ನಾವೆಲ್ಲ ಪರಿಶ್ರಮ ಪಡುತ್ತಿದ್ದೇವೆ. ಆದರೆ, ಅದಕ್ಕೆ ತಕ್ಕ ಸಂಬಳ ಸಿಗುತ್ತಿಲ್ಲ’ ಎಂದು ಶಿಕ್ಷಕಿಯರು ಬೇಸರ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ