Breaking News

ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದನ್ನ ಪ್ರಶ್ನಿಸಿ ನಾನು ಕೋರ್ಟ್​ಗೆ ಹೋಗುತ್ತೇನೆ: ಸಿಎಂ ಇಬ್ರಾಹಿಂ

Spread the love

ಬೆಂಗಳೂರು: ಜೆಡಿಎಸ್​ ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದು ತಪ್ಪು.

ಹಾಗೂ ವಜಾಗೊಳಿಸಬೇಕೆಂದಿದ್ದರೆ ಸಭೆ ಕರೆದು 2/3 ಬೆಂಬಲದೊಂದಿಗೆ ಮಾಡಬೇಕು. ಯಾವುದೇ ನಿಯಮ ಪಾಲನೆ ಮಾಡದೇ ನನ್ನನ್ನು ಏಕಾಏಕಿ ಸ್ಥಾನದಿಂದ ತೆಗೆದು ಹಾಕಿದ್ದಾರೆ. ಈ ಬಗ್ಗೆ ನಾನು ಕೋರ್ಟ್​ಗೆ ಹೋಗುತ್ತೇನೆ ಎಂದು ಹಿರಿಯ ರಾಜಕೀಯ ಮುಖಂಡ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಜೆಡಿಎಸ್​ನಿಂದ ಅಮಾನತು ಮಾಡಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಇನ್ನು ಏನು ಉಚ್ಚಾಟನೆ ರೀ, ಅವರೇ ಪಕ್ಷದಲ್ಲಿ ಇಲ್ಲ, ದೇವೇಗೌಡರ ಜೊತೆ ಯಾರು ಇದ್ದಾರೇ ರೀ? ದೇವೇಗೌಡರು ಪ್ರಧಾನಿಯಾಗಿದ್ದವರು. 70 ವರ್ಷದಿಂದ ರಾಜಕಾರಣ ಮಾಡ್ತಾ ಇದ್ದಾರೆ. ಪಕ್ಷವನ್ನು ನಡೆಸಿದವರು. ತಪ್ಪುಗಳ ಮೇಲೆ ತಪ್ಪು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಹೆಚ್.ಡಿ. ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಮೊದಲ ತಪ್ಪು. ನನ್ನನ್ನು ಅಮಾನತು ಮಾಡಿದ್ದು ಎರಡನೇ ತಪ್ಪು. ನೀವು ಬಿಜೆಪಿ ಜೊತೆ ಹೋಗೋದು ತಪ್ಪು ಅಂತ ಹೇಳಿದ್ದಕ್ಕೆ ಈ ಶಿಕ್ಷೆನಾ? ಮಗ ಕುಮಾರಸ್ವಾಮಿಯನ್ನು ತೆಗೆಯಬೇಕಿತ್ತು. ನಾನು ನಾಲ್ಕು ವರ್ಷಗಳಿಂದ ಇದ್ದ ಎಂಎಲ್ಸಿ ಸ್ಥಾನ ಬಿಟ್ಟು ಜೆಡಿಎಸ್​ಗೆ ಬಂದೆ. ಅದಕ್ಕೆ ಕೊಟ್ಟ ಶಿಕ್ಷೆನಾ ದೇವೇಗೌಡರೇ?. ಮಗನಿಗಾಗಿ ಇನ್ನು ಎಷ್ಟು ಜನರನ್ನು ಬಲಿ ಕೋಡ್ತೀರಾ? ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ 36 ಜನ ಬಂದಿದ್ದರು. ಅದರಲ್ಲಿ 28 ಜನ ಇವರ ಸಂಬಂಧಿಕರೇ ಇದ್ದರು. ಸಿ‌‌.ಕೆ.ನಾಣು ಅವರಿಗೆ ಅಧಿಕಾರ ಇಲ್ಲವೆಂದು ಯಾರು ಹೇಳಿದ್ದು? ನ.9 ಕ್ಕೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದಿದ್ದು ನಾನಲ್ಲ, ಜೆಡಿಎಸ್ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ಸಿ.ಕೆ. ನಾಣು. ನಾಣು ಅವರಿಗೆ ಪತ್ರ ಬರೆದು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆಯಬಾರದು ಎಂದು ದೇವೇಗೌಡರು ಸೂಚಿಸಿದ್ದರು. ಆದರೂ ಇವರು ಸಭೆ ಮಾಡಿದರು ಎಂದು ವ್ಯಂಗ್ಯವಾಡಿದರು.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ