Breaking News

ವಿಶ್ವಕಪ್ ಫೈನಲ್​​ನಲ್ಲಿ ಭಾರತದ ಸೋಲು: ನಿರಾಸೆಯಿಂದ ಯುವಕ ಸಾವು!

Spread the love

ಗುವಾಹಟಿ(ಅಸ್ಸೋಂ): ನಿನ್ನೆ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲನುಭವಿಸಿದ್ದರಿಂದ ತೀವ್ರ ನಿರಾಸೆಯಿಂದ ಖಿನ್ನತೆಗೆ ಒಳಗಾಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಗುವಾಹಟಿಯ ಸಾವ್​ಕುಚಿಯಲ್ಲಿ ನಡೆದಿದೆ.

ಮೃಣಾಲ್ ಮಜುಂದಾರ್‌(20) ಮೃತ ಯುವಕ.

ಮೃತ ಮೃಣಾಲ್ ಕುಟುಂಬಸ್ಥರ ಪ್ರಕಾರ, ಮೃಣಾಲ್ ನಿನ್ನೆ ಭಾರತದ ಸೋಲಿನಿಂದ ನಿರಾಸೆಗೊಂಡು ಊಟ ಸೇವಿಸದೇ ರಾತ್ರಿ 11 ಗಂಟೆಗೆ ಮಲಗಿದ್ದರು. ಮೃಣಾಲ್ ಬೆಳಗ್ಗೆ ಎಷ್ಟೊತ್ತಾದರೂ ಏಳದಿದ್ದಾಗ. ಅನುಮಾನಗೊಂಡ ಕುಟುಂಬಸ್ಥರು, ಮೃಣಾಲ್​ ಮಲಗಿದ್ದ ಕೊಠಡಿಯ ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ. ಈ ವೇಳೆ ಮೃಣಾಲ್​ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದನ್ನು ಕಂಡು ತಕ್ಷಣ ಅವರನ್ನು ಜಿಎಂಸಿಎಚ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮೃಣಾಲ್​ನನ್ನು ಪರೀಕ್ಷಿಸಿದ ವೈದ್ಯರು, ಮೃಣಾಲ್ ಈಗಾಗಲೇ​ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಮೃತ ಮೃಣಾಲ್ ಮಜುಂದಾರ್ ಐಟಿಐ ವಿದ್ಯಾರ್ಥಿಯಾಗಿದ್ದಾರೆ. ಮೃಣಾಲ್ ಭಾರತ ಸೋತಿದ್ದರಿಂದ ನಿರಾಸೆಗೊಂಡು ಸಾವನ್ನಪ್ಪಿದ್ದಾರೆ


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ