ಹೈದರಾಬಾದ್: ವಿಶ್ವಕಪ್ಗೂ ಮುನ್ನ ಆರಂಭವಾಗಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯ ಏಕದಿನ ಪಂದ್ಯಗಳು ಮುಗಿದಿವೆ.
5 ಟಿ20 ಪಂದ್ಯಗಳು ಬಾಕಿ ಇದ್ದು, ಇದು ನವೆಂಬರ್ 23ರಿಂದ ಆರಂಭವಾಗಲಿದೆ. ವಿಶ್ವಕಪ್ ಮುಗಿದ ನಾಲ್ಕು ದಿನಗಳ ಅವಧಿಯ ಅಂತರದಲ್ಲಿ ಸರಣಿ ಆರಂಭವಾಗುತ್ತಿದೆ. ಇದಕ್ಕೆ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ 15 ಜನ ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ.
ನವೆಂಬರ್ 23 ರಂದು ವಿಶಾಖಪಟ್ಟಣದಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ-20ಸರಣಿ ಡಿಸೆಂಬರ್ 3 ರಂದು ಬೆಂಗಳೂರುನಲ್ಲಿ ಮುಕ್ತಾಯವಾಗಲಿದೆ. ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆ ಆಗಿದ್ದ ತಂಡವನ್ನೇ ತೆಗೆದುಕೊಳ್ಳಲಾಗಿದ್ದು ಅದರಲ್ಲಿ ಎರಡು ಬದಲಾವಣೆ ಮಾಡಲಾಗಿದೆ.
ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ: ಗಾಯದಿಂದ ಚೇತರಿಸಿಕೊಂಡ ನಂತರ ಐರ್ಲೆಂಡ್ ಸಿರೀಸ್ ನಾಯಕತ್ವ, ಏಷ್ಯಾಕಪ್ ಮತ್ತು ವಿಶ್ವಕಪ್ನಲ್ಲಿ ಬುಮ್ರಾ ಆಡಿರುವುದರಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಕಮ್ಬ್ಯಾಕ್ ಮಾಡಿದ ನಂತರ ಸತತ ಮೂರು ತಿಂಗಳ ಕಾಲ ತಂಡದಲ್ಲಿ ಬುಮ್ರಾ ಆಡಿದ್ದಾರೆ.ಸಂಜು ಸ್ಯಾಮ್ಸನ್ಗೆ ಅನ್ಯಾಯ: ಐರ್ಲೆಂಡ್ ಸರಣಿಯಲ್ಲಿ ವಿಕೆಟ್ ಕೀಪಿಂಗ್ ಜೊತೆಗೆ ಬ್ಯಾಟಿಂಗ್ ಸಹ ಮಾಡಿದ್ದ ಸಂಜು ಸ್ಯಾಮ್ಸನ್ ಈ ಬಾರಿ ತಂಡದಲ್ಲಿ ಸ್ಥಾನ ಪಡೆದಿಲ್ಲ. ಜಿತೇಶ್ ಶರ್ಮಾ ಅವರನ್ನೇ ಪ್ರಮುಖ ಕೀಪರ್ ಆಗಿ ತಂಡಕ್ಕೆ ತೆಗೆದುಕೊಳ್ಳಲಾಗಿದೆ.