ಬೆಂಗಳೂರು: ಕಿವೀಸ್ ವಿರುದ್ಧದ ಸೆಮೀಸ್ ಪಂದ್ಯಕ್ಕೂ ಮುನ್ನ ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ಭಾರತ ತಂಡ ನೆದರ್ಲೆಂಡ್ಸ್ ಜೊತೆಗೆ ಉತ್ತಮ ಅಭ್ಯಾಸ ಪಂದ್ಯವನ್ನಾಡಿತು.
2023ರ ವಿಶ್ವಕಪ್ನಲ್ಲಿ ಭಾರತ ತಂಡ ಲೀಗ್ ಹಂತದಲ್ಲಿ ಒಂದೂ ಸೋಲನ್ನು ಕಾಣದೇ ಸೆಮಿ ಫೈನಲ್ ಪ್ರವೇಶ ಪಡೆದುಕೊಂಡಿತು. ಬ್ಯಾಟಿಂಗ್ ಮತ್ತು ಬೌಲಿಂಗ್ ತಂಡ ತನ್ನ ಪ್ರದರ್ಶನವನ್ನು ಹಾಗೇ ಮುಂದುವರೆಸಿದೆ.
ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 4 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿತು. ಶ್ರೇಯಸ್ ಅಯ್ಯರ್ (128*) ಮತ್ತು ಕೆಎಲ್ ರಾಹುಲ್ (102) ಶತಕವನ್ನು ಗಳಿಸಿದರೆ, ರೋಹಿತ್ ಶರ್ಮಾ (61), ಶುಭಮನ್ ಗಿಲ್ (51) ಮತ್ತು ವಿರಾಟ್ ಕೊಹ್ಲಿ (51) ಅರ್ಧಶತಕ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಈ ಗುರಿಯನ್ನು ಬೆನ್ನತ್ತಿದ ಡಚ್ಚರು 47.5 ಬಾಲ್ಗೆ 250 ರನ್ ಗಳಿಸಿ ಆಲ್ಔಟ್ ಆದರು. ಇದರಿಂದ ರೋಹಿತ್ ಶರ್ಮಾ ಪಡೆ 160 ರನ್ಗಳ ಗೆಲುವು ದಾಖಲಿಸಿತು.