Breaking News

SSLC ವಿದ್ಯಾರ್ಥಿಗಳೇ ಗಮನಿಸಿ: ಪರೀಕ್ಷೆ-1ಕ್ಕೆ ನೋಂದಣಿಗೆ ನ.15ರ ವರೆಗೆ ಅವಕಾಶ

Spread the love

ಬೆಂಗಳೂರು: ಮಾರ್ಚ್‌ನಲ್ಲಿ ನಡೆಯಲಿರುವ ಎಸೆಸೆಲ್ಸಿ ಪರೀಕ್ಷೆ-1ಕ್ಕೆ ನೋಂದಣಿ ಮಾಡಿಕೊಳ್ಳುವ ಅವಧಿ ಯನ್ನು ನ.15ರ ವರೆಗೆ ವಿಸ್ತರಣೆ ಮಾಡಲಾಗಿದ್ದು ಈ ಅವಕಾಶವನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬಹುದಾಗಿದೆ.

2023-24ನೇ ಸಾಲಿನಿಂದ ಜಾರಿಗೆ ಬರುವಂತೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ 3 ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಇದರಲ್ಲಿ ಪರೀಕ್ಷೆ-1 ಕ್ಕೆ ಅರ್ಹ ವಿದ್ಯಾರ್ಥಿಗಳು ನೋಂದಣಿ ಮಾಹಿತಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವೆಬ್‌ಸೈಟ್‌ ನಲ್ಲಿ ಶಾಲಾ ಲಾಗಿನ್‌ ಮೂಲಕ ಪಡೆಯಲು ತಿಳಿಸಲಾಗಿದೆ. ಈ ಹಿಂದೆ ಆನ್ ಲೈನ್ ಮೂಲಕ ನೋಂದಾಯಿಸಿಕೊಳ್ಳಲು ನ.4 ಕೊನೆಯ ದಿನವಾಗಿತ್ತು. ಶಾಲೆಗಳು ಶಾಲಾ ಸಂಕೇತ ಪಡೆಯುವ ಸಮಯಾವಕಾಶ ವನ್ನು ನ.27ರ ವರೆಗೆ ವಿಸ್ತರಿಸಲಾಗಿದ್ದು , ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ದೇಶಕರು ತಿಳಿಸಿದ್ದಾರೆ.


Spread the love

About Laxminews 24x7

Check Also

ಲಿಂಗಾಯತ ಬಿಸಿನೆಸ್ ಫೋರಮ್‌ (ಎಲ್‌ಬಿಎಫ್‌) ಉದ್ಯಮಿಗಳು, ವೃತ್ತಿಪರರು ಮತ್ತು ವ್ಯಾಪಾರ ನಾಯಕರ ಸಕ್ರಿಯ ವೇದಿಕೆ ಇತ್ತೀಚೆಗೆ ತನ್ನ 50ನೇ ಮಾಸಿಕ ಸಭೆಯನ್ನು ಅದ್ಧೂರಿಯಾಗಿ ಆಚರಿಸಿತು..

Spread the love ಲಿಂಗಾಯತ ಬಿಸಿನೆಸ್ ಫೋರಮ್‌ (ಎಲ್‌ಬಿಎಫ್‌) ಉದ್ಯಮಿಗಳು, ವೃತ್ತಿಪರರು ಮತ್ತು ವ್ಯಾಪಾರ ನಾಯಕರ ಸಕ್ರಿಯ ವೇದಿಕೆ ಇತ್ತೀಚೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ