Breaking News

ಬಿಹಾರದಲ್ಲಿ ಮಹಾಘಟಬಂಧನ್‌ಗೆ ಮುನ್ನಡೆ – ಎನ್‌ಡಿಎ ಹಿನ್ನಡೆಗೆ ಕಾರಣ ಏನು?

Spread the love

ನವದೆಹಲಿ : ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭೆ ಚುನಾವಣೆ ಅಂತ್ಯವಾಗಿದ್ದು. ಮೂರು‌ ಹಂತದಲ್ಲಿ ಮತದಾನ ಮುಕ್ತಾಯವಾಗಿದೆ. ಈ ಬೆನ್ನಲ್ಲೇ ಚುನಾವಣೋತ್ತರ‌ ಸಮೀಕ್ಷೆಗಳು ಬಿಡುಗಡೆಯಾಗಿದ್ದು ಮಹಾಘಟಬಂಧನ್ ಸರ್ಕಾರ ರಚಿಸುವ ಹೊಸ್ತಿಲಲ್ಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ಸಿ – ವೋಟರ್ ಸೇರಿ ಹಲವು ಸಮೀಕ್ಷೆಗಳು ಬಿಹಾರದಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟವಾದ ಬಹುಮತ ಇಲ್ಲ ಎಂದರೆ ಇನ್ನು ಹಲವು ಸಮೀಕ್ಷೆಗಳು ಎನ್‌ಡಿಎ ಮೈತ್ರಿಗೆ ಭಾರೀ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಿವೆ. ಕೆಲವು ಸಮೀಕ್ಷೆಗಳು ಮಹಾಘಟಬಂಧನ್ ಈ ಬಾರಿ ಉತ್ತಮ ಫಲಿತಾಂಶ ಪಡೆಯಬಹುದು ಎಂದು ವರದಿ ನೀಡಿದರೆ ಚಾಣಕ್ಯ ಸೇರಿದಂತೆ ಹಲವು ಸಂಸ್ಥೆಗಳು ಬಿಹಾರದಲ್ಲಿ ಮಹಾಘಟಬಂಧನ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳಿದೆ

ಜೆಡಿಯುಗೆ ಈ ಬಾರಿ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ದುಸ್ವಪ್ನವಾಗಿ ಕಾಡಿದ್ದಾರೆ. ಎನ್‌ಡಿಎ ಮೈತ್ರಿಯಿಂದ ಹೊರ ಬಂದಿದ್ದ ಎಲ್‌ಜೆಪಿ ಜೆಡಿಯು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಮಾತ್ರ ಪ್ರತ್ಯೇಕವಾಗಿ ಸ್ಪರ್ಧಿಸಿತ್ತು. ಬಿಜೆಪಿ ಮಹಾಘಟಬಂಧನ್ ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ‌ ಎಲ್‌ಜೆಪಿ ಸ್ಪರ್ಧೆ ಮಾಡಿರಲಿಲ್ಲ. ಇದು ಜೆಡಿಯುಗೆ ದೊಡ್ಡ ಹಿನ್ನಡೆಯಾಗಿದೆ. ಜೆಡಿಯುಗೆ ಸಿಗಬೇಕಿದ್ದ ಮತಗಳು ಈ ಬಾರಿ ಎಲ್‌ಜೆಪಿಗೂ ಪ್ರತ್ಯೇಕವಾಗಿ ವಿಭಜನೆಯಾಗಿದೆ. ಇದು ಜೆಡಿಯು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಮಹಾಘಟಬಂಧನ್ ಗೆಲುವಿಗೆ ಸಹಕಾರಿಯಾಗಿದೆ.

ಬಿಹಾರದಲ್ಲಿ ದೊಡ್ಡ ಮಟ್ಟದ ಪ್ರಚಾರವೂ ಜನರ ಮೇಲೆ ಪರಿಣಾಮ ಬೀರಿದೆ. ಈ ಬಾರಿ ಪ್ರಚಾರದಲ್ಲಿ ಕೊರೊನಾ ನಿರ್ವಹಣೆ, ನಿರುದ್ಯೋಗ, ಆರ್ಥಿಕ ಕುಸಿತ ಮತ್ತು ಬಿಹಾರ ಪ್ರವಾಹದ ಬಗ್ಗೆ ಹೆಚ್ಚು ಚರ್ಚೆ ನಡೆದಿದೆ. ನಿರುದ್ಯೋಗ ವಿಚಾರದಲ್ಲಿ ‌ನಿತೀಶ್ ಕುಮಾರ್ ಮೂರು ಅವಧಿಯಲ್ಲಿ ಪರಿಣಾಮಕಾರಿ ಕೆಲಸ ಮಾಡಿಲ್ಲ ಎನ್ನುವ ವಾದ ಬಿಹಾರ ಜನರಲ್ಲಿತ್ತು. ಇದರ ಜೊತೆಗೆ ಲಾಕ್‌ಡೌನ್‌ ಅವಧಿಯಲ್ಲಿ ವಾಪಸ್ ಊರಿಗೆ ಮರಳಿದ್ದ ಜನರಿಗೆ ಸರಿಯಾದ ವ್ಯವಸ್ಥೆ ಮಾಡದ ಈ ಸಿಟ್ಟು ದುಪ್ಪಟ್ಟಾಗಿಸಿತ್ತು. ಇದು ಯುವಕರ ಮತಗಳು ಮಹಾಘಟಬಂಧನ್ ಕಡೆಗೆ ವಾಲುವಂತೆ ಮಾಡಿರಬಹುದು.

ಮೂರು ಅವಧಿಯಲ್ಲಿ ಸರ್ಕಾರ ಮುನ್ನಡೆಸಿದ್ದ ನಿತೀಶ್ ಕುಮಾರ್ ಅಭಿವೃದ್ಧಿ ಮೇಲೆ‌ ಮತ ಕೇಳಬೇಕಿತ್ತು. ಆದರೆ ಈ ಬಾರಿ ಅವರು ಕಡೆಯ ಚುನಾವಣೆ ಅನ್ನೋ‌ ಅನುಕಂಪ ಗಿಟ್ಟಿಸಿಕೊಳ್ಳಲು ಜೋತು ಬಿದ್ದರು. ಇದನ್ನು ತೇಜಸ್ವಿ ಯಾದವ್ ಸರಿಯಾಗಿ ಬಳಸಿಕೊಂಡಿದ್ದರು ಉದ್ಯೋಗ ಸೃಷ್ಟಿ ಮಾಡಿಲ್ಲ ‌ನಿತೀಶ್ ಕುಮಾರ್ ಗೆ ವಯಸ್ಸಾಗಿದ್ದು ಅವರಿಂದ ಅಭಿವೃದ್ಧಿ ಅಸಾಧ್ಯ ಎಂದು ಹೇಳುತ್ತಾ ಬಂದಿದ್ದು ಮತದಾರರ ಮೇಲೆ ಹೆಚ್ಚು ಪರಿಣಾಮ ಬೀರಿದೆ.

ಕಳೆದ ಎರಡು ವರ್ಷಗಳಿಂದ ಬಿಹಾರ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದೆ. ಈ ಸಂದರ್ಭಗಳಲ್ಲಿ ಪರಿಣಾಮತ್ಮಾಕವಾಗಿ ಸರ್ಕಾರ ಕಾರ್ಯ ನಿರ್ವಹಿಸಿಲ್ಲ, ನಿತೀಶ್ ಕುಮಾರ್ ಸರ್ಕಾರ ಜನರ ಸಂಕಷ್ಟ ಸರಿಯಾಗಿ ಆಲಿಸಿಲ್ಲಎಂಬ ಆಕ್ರೋಶ ಜನರಲ್ಲಿ ಇತ್ತು. ಆದರೆ ಇದಕ್ಕೆ ವಿರುದ್ದ ಎನ್ನುವಂತೆ ಪ್ರವಾಹ ಮತ್ತು ಕೊರೊನಾ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಕೆಲಸ ತೇಜಸ್ವಿ ಯಾದವ್ ಉತ್ತಮ ಕೆಲಸ ಮಾಡಿ ಜನ ಮನ್ನಣೆಗಳಿಸಿದ್ದರು.

ಬಾಲಿವುಡ್‌ನಲ್ಲಿ ಯಶಸ್ಸು ಕಾಣದೇ ತಂದೆಯ ಮರಣದ ನಂತರ ಏಕಾಏಕಿ ಚುನಾವಣಾ ರಾಜಕೀಯಕ್ಕೆ ಬಂದಿದ್ದ ಚಿರಾಗ್ ಪಾಸ್ವಾನ್ ಅವರನ್ನು ಬಿಹಾರ ಜನರು ಗಂಭೀರ ರಾಜಕಾರಣಿ ಎಂದು ಭಾವಿಸಿರಲಿಲ್ಲ. ಇವರ ಬದಲು ನಿರಂತರ ರಾಜಕಾರಣದಲ್ಲಿರುವ ತೇಜಸ್ವಿ ಪರ್ಯಾಯ ಎಂದು ಅವರನ್ನು ಜನರು ಒಪ್ಪಿಕೊಂಡಂತಿದೆ.


Spread the love

About Laxminews 24x7

Check Also

ಇಲ್ಲಿನ ಇನ್ಫೋಸಿಸ್ ಕ್ಯಾಂಪಸ್​ನಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರೆದಿದ್ದು,

Spread the loveಮೈಸೂರು: ಇಲ್ಲಿನ ಇನ್ಫೋಸಿಸ್ ಕ್ಯಾಂಪಸ್​ನಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರೆದಿದ್ದು, ಸುರಕ್ಷತಾ ಕ್ರಮವಾಗಿ ಕಂಪನಿಯ ಟ್ರೈನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ