Breaking News

ಸಚಿವ ಸ್ಥಾನ ಸಿಗುವ ಬಗ್ಗೆ ನೂರಕ್ಕೆ ನೂರು ಭರವಸೆ ಇದೆ” ಅಶೋಕ್ ಪಟ್ಟಣ್

Spread the love

ಬೆಂಗಳೂರು: “ಸಚಿವ ಸ್ಥಾನಕ್ಕೆ ಚಾತಕ ಪಕ್ಷಿ ತರ ಕಾಯುತ್ತಿದ್ದೇನೆ. ಸಚಿವ ಸ್ಥಾನ ಸಿಗುವ ಬಗ್ಗೆ ನೂರಕ್ಕೆ ನೂರು ಭರವಸೆ ಇದೆ” ಎಂದು ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ತಿಳಿಸಿದರು.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಮಗೂ ಶೀಘ್ರದಲ್ಲೇ ಅವಕಾಶ ಸಿಗುತ್ತೆ. ಮತ್ತೆ ಯಾವುದೇ ವಿಚಾರವನ್ನು ನಾನು ಮಾತನಾಡಲ್ಲ. ಶಾಸಕರು ಈ ಬಗ್ಗೆ ಹೇಳಿ ಹೇಳಿಯೇ ಪಕ್ಷಕ್ಕೆ ಸ್ವಲ್ಪ ಹಿನ್ನಡೆ ಆಗ್ತಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ಮಾತನಾಡಬೇಡಿ ಅಂತ ಹೇಳಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಟೈಮ್ ಬಂದಾಗ ಮಂತ್ರಿ ಆಗುತ್ತೇನೆ” ಎಂದರು.

“ನಮ್ಮ ಹಣೆಬರಹ ನೋಡಿಕೊಂಡು ಕಾಯುತ್ತಿದ್ದೇವೆ. ಜಾತಕ ಪಕ್ಷದ ರೀತಿಯಲ್ಲಿ ಸಚಿವ ಸ್ಥಾನ ಸಿಗಬಹುದು ಎಂದು ಕಾಯುತ್ತಿದ್ದೇನೆ. ನನ್ನ ಸೇರಿ 135 ಜನರಿಗೂ ಸಚಿವ ಸ್ಥಾನದ ಮೇಲೆ ಆಸೆ ಇದೆ” ಎಂದು ತಿಳಿಸಿದರು.

ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, “ಅವಕಾಶ ಕೊಡುತ್ತೇವೆ ಎಂದು ಹೈಕಮಾಂಡ್ ತಿಳಿಸಿದೆ. ಯಾವುದೇ ಹೇಳಿಕೆ ನೀಡಬಾರದು ಎಂದು ಡಿಕೆಶಿ ತಿಳಿಸಿದ್ದಾರೆ. ಹಾಗಾಗಿ ಈ ವಿಚಾರವಾಗಿ ಜಾಸ್ತಿ ಮಾತನಾಡಲ್ಲ. ಮಂತ್ರಿ ಆಗಿಯೇ ಆಗಬೇಕು ಎಂದು ನನಗೂ ಆಸೆ ಇದೆ. ಯಾವಾಗ ಟೈಂ ಬರುತ್ತದೆ ಎಂದು ಕಾಯುತ್ತಿದ್ದೇವೆ” ಎಂದು ಹೇಳಿದರು.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ