ಹೈದರಾಬಾದ್: ಮುಂಬೈನ ಬೀದಿಗಳಲ್ಲಿ ಪ್ರಯಾಣಿಸುವಾಗ ‘ಕಪ್ಪು ಮತ್ತು ಹಳದಿ’ ಟ್ಯಾಕ್ಸಿಗಳ ಚಿತ್ರವು ಖಂಡಿತವಾಗಿಯೂ ಕಣ್ಮುಂದೆ ಬರುತ್ತದೆ.
ಅನೇಕ ವರ್ಷಗಳಿಂದ, ಈ ಟ್ಯಾಕ್ಸಿ ಸೇವೆಯನ್ನು ‘ಕಾಲಿ-ಪಿಲಿ’ ಎಂದು ಕರೆಯಲಾಗುತ್ತಿತ್ತು. ಇದು ಸಾಮಾನ್ಯರಿಂದ ಶ್ರೀಮಂತರವರೆಗಿನ ಮುಂಬೈನ ಎಲ್ಲಾ ವರ್ಗದ ಜನರಿಗೆ ಸಾರಿಗೆ ಸಾಧನವಾಗಿತ್ತು. ಈಗ ಕನಸಿನ ನಗರಿಯಲ್ಲಿ ಕಪ್ಪು ಹಳದಿಯ ನೆನಪುಗಳು ಮೂಲೆ ಸೇರುವ ದಿನ ಸಮೀಪಿಸುತ್ತದೆ.
ಮಹಾನಗರಿ ಮುಂಬೈಗೂ ಇಲ್ಲಿನ ‘ಕಾಲಿ-ಪಿಲಿ’ ಟ್ಯಾಕ್ಸಿಗೂ ಅವಿನಾಭಾವ ಸಂಬಂಧವಿದ್ದು, ಈಗ ಸುಮಾರು ಆರು ದಶಕಗಳ ನಂತರ ಅದರ ಪಯಣ ಮುಗಿಯಲಿದೆ. ಜನಪ್ರಿಯ ಬೆಸ್ಟ್ ಡಬಲ್ ಡೆಕ್ಕರ್ ಡೀಸೆಲ್ ಬಸ್‌ಗಳ ಸಂಚಾರವನ್ನು ಇತ್ತೀಚೆಗೆ ಸ್ಥಗಿತಗೊಳಿಸಲಾಗಿತ್ತು. ಅದರ ಬೆನ್ನಲ್ಲೇ ಈಗ ಕಪ್ಪು ಮತ್ತು ಹಳದಿ ಟ್ಯಾಕ್ಸಿಗಳು ಸಹ ರಸ್ತೆಗಳಿಂದ ಕಣ್ಮರೆಯಾಗಲಿವೆ