Breaking News

ಚೆನ್ನೈನ ಅವಡಿ ಬಳಿ ಹಳಿ ತಪ್ಪಿದ ವಿದ್ಯುತ್ ಚಾಲಿತ​ ರೈಲು: ತಪ್ಪಿದ ಭಾರಿ ದುರಂತ

Spread the love

ಚೆನ್ನೈ (ತಮಿಳುನಾಡು): ಇಂದು ಬೆಳಗ್ಗೆ ತಮಿಳುನಾಡು ರಾಜ್ಯದ ಚೆನ್ನೈನ ಅವಡಿ ರೈಲು ನಿಲ್ದಾಣದ ಬಳಿ ವಿದ್ಯುತ್ ಚಾಲಿತ ರೈಲು (electric train) ಹಳಿ ತಪ್ಪಿದೆ.

ಅದೃಷ್ಟವಶಾತ್​ ಪ್ರಯಾಣಿಕರಿಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ರೈಲ್ವೆ ಹಳಿ ಬಿರುಕು ಬಿಟ್ಟಿದ್ದರಿಂದ ಈ ಅವಘಡ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.

ತಿರುವಳ್ಳೂರಿನಿಂದ ಪುರಟ್ಚಿ ತಲೈವರ್​ ಡಾ. ಎಂಜಿಆರ್​ ಸೆಂಟ್ರಲ್​ ರೈಲು ನಿಲ್ದಾಣದವರೆಗೆ ರೈಲ್ವೆ ಹಳಿಯ (ಟ್ರ್ಯಾಕ್​) ನಿರ್ವಹಣಾ ಕಾರ್ಯ ನಡೆಯುತ್ತಿದೆ. ಈ ವೇಳೆ, ಇಂದು (ಅ.24) ಬೆಳಗ್ಗೆ ತಿರುವಳ್ಳೂರಿನಿಂದ ತಿರುಟ್ಟಣಿಗೆ ತೆರಳುತ್ತಿದ್ದ ಎಲೆಕ್ಟ್ರಿಕ್​ ರೈಲು ಅಣ್ಣನೂರಿನಿಂದ ಅವಡಿ ತಲುಪಿದ ಬಳಿಕ ಅವಘಡ ಸಂಭವಿಸಿದೆ. ಈ ರೈಲಿನಲ್ಲಿ 4 ಬೋಗಿಗಳು ಹಳಿ ತಪ್ಪಿವೆ.

ಇಂದು ರಜಾದಿನವಾದ ಕಾರಣ ರೈಲು ನಿಲ್ದಾಣದಲ್ಲಿ ಜನಸಂದಣಿ ಕಡಿಮೆಯಾಗಿತ್ತು. ಅದೃಷ್ಟವಶಾತ್​ ರೈಲಿನಲ್ಲಿ ಪ್ರಯಾಣಿಕರಿಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಈ ಬಗ್ಗೆ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಅವಘಡದಿಂದಾಗಿ ಅವಡಿ -ಚೆನ್ನೈ ಮಾರ್ಗವಾಗಿ ತೆರಳುವ ರೈಲುಗಳು, ವಂದೇ ಭಾರತ್​ ಸೇರಿದಂತೆ ಇತರ ಎಲೆಕ್ಟ್ರಿಕ್​ ರೈಲುಗಳು, ಒಟ್ಟಾರೆಯಾಗಿ ರೈಲು ಸೇವೆಗಳ ಸಂಚಾರಕ್ಕೆ ತೊಂದರೆಯಾಗಿದೆ.

ಸದ್ಯ ರೈಲು ಭೋಗಿಗಳ ತೆರವು ಕಾರ್ಯಾಚರಣೆಯನ್ನು ರೈಲ್ವೆ ಇಲಾಖೆ ಕೈಗೊಂಡಿದೆ. ಈ ಅವಘಡಕ್ಕೆ ಚಾಲಕನ ಅಜಾಗರೂಕತೆ ಅಥವಾ ಸಿಗ್ನಲ್​ ವೈಫಲ್ಯ ಕಾರಣವೇ? ಎಂದು ರೈಲ್ವೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ