ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮ ದೇವರು ಶ್ರೀ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ದೇವಸ್ಥಾನದ ಅಭಿವೃದ್ಧಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರ ವಿಶೇಷ ಪ್ರಯತ್ನದಿಂದ ರೂ. 29 ಲಕ್ಷ ಅನುದಾನದ ಅಭಿವೃದ್ಧಿ ಕಾಮಗಾರಿಗೆ ಗ್ರಾಮದ ಬಿಜೆಪಿ ಕಾರ್ಯಕರ್ತರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮೊದಲಿಗೆ ಶ್ರೀ ಬೀರೇಶ್ವರ ಸಹಕಾರಿ ಇಂಗಳಿ ಶಾಖೆಯ ನಿರ್ದೇಶಕ ಪ್ರಕಾಶ ಮಿರ್ಜಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಂಕರ ಪವಾರ ಮಾತನಾಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಮಾಜಿ ಸಚಿವೆ ಸೌ. ಶಶಿಕಲಾ ಜೊಲ್ಲೆ ಇವರು ಇಂಗಳಿ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಸರ್ಕಾರದಿಂದ ಅನುದಾನ ನೀಡುವ ಮೂಲಕ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಮತ್ತು ದೀಪಸ್ತಂಭದ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗಳ್ಳಲಾಗುತ್ತಿದೆ. ಇದರಿಂದ ಗ್ರಾಮದ ಸೌಂದರ್ಯ ಮತ್ತಷ್ಟು ಹೆಚ್ಚಾಗಲಿದೆ. ಆದ್ದರಿಂದ ಇಂಗಳಿ ಗ್ರಾಮಸ್ಥರು ಜೊಲ್ಲೆ ದಂಪತಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಅಣ್ಣಾಸಾಹೇಬ ಚೌಗುಲೆ, ತಾತ್ಯಾಸಾಹೇಬ ಚೌಗುಲೆ, ಸಿದ್ರಾಮ ಶಳಕೆ, ಬಸಪ್ಪಾ ಮಿರ್ಜೆ, ಸದಾಶಿವ ಮಿರ್ಜೆ, ಮಾಜಿ ಜಿ.ಪಂ. ಸದಸ್ಯ ಅಣ್ಣಾಸಾಹೇಬ ಪವಾರ, ರಾಜು ಶೆಟ್ಟಿ, ಗುಣಪಾಲ ಚೌಗುಲೆ, ಖಂಡು ಮಾಳಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಡಾ. ಅಜಿತ ಚಿಗರೆ, ಶಂಕರ ಮಗದುಮ್, ಗ್ರಾ.ಪಂ. ಸದಸ್ಯರಾದ ಸಂಜಯ ಗುರವ, ಮಹಾದೇವ ಕಾಂಬಳೆ, ರಾಜು ಚೌಗುಲೆ, ಮಹಾದೇವ ಲೋಕರೆ, ಗಣಪತಿ ಚೌಗುಲೆ, ಪುಂಡಲೀಕ ಜತ್ರಾಟೆ ಸೇರಿದಂತೆ ಗ್ರಾ. ಪಂ.ಯ ಎಲ್ಲ ಸದಸ್ಯರಾದ ಶ್ರೀ ಬೀರೇಶ್ವರ ಶಾಖೆಯ ನಿರ್ದೇಶಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ದಾದಾ ಪಂಡಿತ್ ವಂದಿಸಿದರು