Breaking News

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ: ಡೆತ್‌ನೋಟ್‌ ಆಧರಿಸಿ ಏಳು ಜನರ ವಿರುದ್ಧ ಎಫ್​ಐಆರ್ ದಾಖಲು

Spread the love

ಕೊಪ್ಪಳ: ಗುತ್ತಿಗೆದಾರರ ಉಪಗುತ್ತಿಗೆ ಕೆಲಸ ಮಾಡಿಕೊಂಡು ಹಣಕಾಸಿನ ತೊಂದರೆಗೆ ಸಿಲುಕಿದ್ದ ಪರಿಣಾಮ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತನು ಬರೆದಿಟ್ಟಿದ್ದ ಡೆತ್‌ನೋಟ್‌ ಆಧರಿಸಿ ಏಳು ಜನರ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ಶನಿವಾರ ಎಫ್ ಐಆರ್ ದಾಖಲಿಸಲಾಗಿದೆ.

 

ಕೊಪ್ಪಳದ ಬಿ ಟಿ ಪಾಟೀಲ ನಗರದ ನಿವಾಸಿ ರಾಜೀವ ಬಗಾಡೆ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡವ. ಕಳೆದ ನಾಲ್ಕು ದಿನಗಳ ಹಿಂದೆ ವಿಷ ಸೇವಿಸಿದ್ದರು. ಮನೆಯವರು ಗಮನಿಸಿ ಅವರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದ ಪರಿಣಾಮ ರಾಜೀವ್​ ಬಗಾಡೆ ಮೃತಪಟ್ಟಿದ್ದಾರೆ.

ಡೆತ್ ನೋಟ್​ದ​ಲ್ಲಿ ಪ್ರಭಾವಿಗಳ ಹೆಸರು : ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ರಾಜೀವ್​ ಬಗಾಡೆ ಡೆತ್‌ನೋಟ್‌ನಲ್ಲಿ ಹಲವರ ಹೆಸರು ಬರೆದಿದ್ದು, ಅದರಲ್ಲಿ ಶಾಸಕರ ಆಪ್ತ ಪ್ರಸನ್ನ ಗಡಾದ್‌, ಗುತ್ತಿಗೆದಾರ ದೊಡ್ಡಪ್ಪಗೌಡ ಹರಗುರಿ, ನಗರಸಭೆ ಸದಸ್ಯ ಚನ್ನಪ್ಪ‌ ಕೋಟ್ಯಾಳ, ನಗರಸಭೆ ಮಾಜಿ ಸದಸ್ಯ ಡಾ. ಉಪೇಂದ್ರ ರಾಜು, ಮುನಿ ವಿಜಯಕುಮಾರ, ರಫಿ, ಮಲ್ಲಿಕಾರ್ಜುನ ಎಂಬುವವರು ಕಿರುಕುಳ ನೀಡಿದ್ದರು. ಗುತ್ತಿಗೆ ಹಿಡಿದಿದ್ದ ಕೆಲಸದ ಹಣ ಬಂದಿಲ್ಲ. ಅದರಲ್ಲಿ ಕೆಲವರು ಹಣ ತೆಗೆದುಕೊಂಡು ವಾಪಸ್​ ನೀಡದೆ ಸತಾಯಿಸಿದ್ದರಿಂದ ನನ್ನ ಮಗ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

ಎಫ್​​ಐಆರ್ ದಲ್ಲಿ ಏನಿದೆ? ಗುತ್ತಿದಾರನ ಬಳಿ ಉಪಗುತ್ತಿಗೆ ಕೆಲಸ ಮಾಡಿದ್ದು, ಅದರ ಬಿಲ್‌ ಬಂದಿದ್ದರೂ ಗುತ್ತಿಗೆದಾರರು ಬಿಲ್‌ ನೀಡಿಲ್ಲ. ಮತ್ತೆ ಕೆಲ ಸ್ನೇಹಿತರು ಹಣವನ್ನು ಪಡೆದುಮರಳಿ ಹಿಂದಿರುಗಿಸಿಲ್ಲ. ಹಣ ಕೇಳಿದರೆ ಬೆದರಿಕೆ,ಕಿರುಕುಳ ನೀಡಿದ್ದರಿಂದ ನನ್ನ ಮಗ ರಾಜೀವ ಬಗಾಡೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಂದೆ ಮೋಹನ್‌ ಬಗಾಡೆ ಕೊಪ್ಪಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆತ್ಮಹತ್ಯೆಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ನಗರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಡೆತ್‌ನೋಟ್‌ನಲ್ಲಿ ಹೆಸರು ಇರುವವರೆಲ್ಲ ಪ್ರಭಾವಿಗಳಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಮೃತನ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ವಿದ್ಯಾರ್ಥಿನಿ ಅಪಹರಣ ಪ್ರಕರಣ: ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಆತಂಕಕಾರಿ ಘಟನೆ ಬಳ್ಳಾರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಬಳ್ಳಾರಿ ಮಹಿಳಾ ಠಾಣೆಯಲ್ಲಿ ನಾಲ್ವರ ವಿರುದ್ಧ ಸಂತ್ರಸ್ತ ಯುವತಿಯ ತಂದೆ ದೂರು ದಾಖಲಿಸಿದ್ದಾರೆ. ಬಳ್ಳಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಮುಖ ಆರೋಪಿ ನವೀನ್ ಎಂಬಾತನನ್ನು ಬಂಧಿಸಿದ್ದು ಉಳಿದವರಿಗಾಗಿ ಜಾಲ ಬೀಸಿದ್ದಾರೆ.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ