Breaking News

ನಿಂತಿದ್ದ 2 ಖಾಸಗಿ ಬಸ್​ಗಳಿಗೆ ಬೆಂಕಿ ತಗುಲಿ ಸುಟ್ಟು ಕರಕಲು

Spread the love

ಕಲಬುರಗಿ: ಖಾಸಗಿ ಕಂಪನಿಗೆ ಸೇರಿದ ಎರಡು ಸ್ಲೀಪರ್ ಬಸ್​ಗಳಿಗೆ ಬೆಂಕಿ ತಗುಲಿ ಧಗಧಗಿಸಿ ಸುಟ್ಟು ಕರಗಲಾದ ಘಟನೆ ಕಲಬುರಗಿ ನಗರದ ಹಾಗರಗಾ ರಸ್ತೆಯ ಮಹೆಫಿಲ್​ ಎ ಖಾಸ್ ಡಾಬಾದ ಬಳಿ ಶನಿವಾರ ನಡೆದಿದೆ.

ಅಕ್ಕಪಕ್ಕದಲ್ಲಿ ನಿಂತಿದ್ದ ಎರಡು ಬಸ್​ಗಳು ಬೆಂಕಿಯ ಕೆನ್ನಾಲೆಗೆಯಿಂದ ಸಂಪೂರ್ಣ ಸುಟ್ಟು ಕರಕಲಾಗಿವೆ. ಹೀಗಾಗಿ ದಟ್ಟವಾದ ಹೊಗೆ ಆವರಿಸಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಅಗ್ನಿ ಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ನಗರದ ಹಾಗರಗಾ ರಸ್ತೆಯ ಮಹೆಫಿಲ್ ಎ ಖಾಸ್ ಡಾಬಾದ ಹತ್ತಿರದ ಮೈದಾನದಲ್ಲಿ ಕಳೆದ ನಾಲ್ಕು ತಿಂಗಳಿಂದ ಒಂದೇ ಕಡೆಯಲ್ಲಿ ಎರಡು ಸ್ಲೀಪರ್​ ಬಸ್​ಗಳು ನಿಂತಿದ್ದವು ಎಂದು ತಿಳಿದುಬಂದಿದೆ. ಡಿಸಿಪಿ ಕನಿಕಾ ಶೆಕ್ರೀವಾಲ್, ಎಸಿಪಿ ರಾಜಣ್ಣ ಸೇರಿದಂತೆ ಪೊಲೀಸ್ ಅಧಿಕಾರಿಗಳು‌ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದ್ದಾರೆ. ಈ ಕುರಿತು ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜಿಲ್ಲೆಯ ಇನ್ನಿತರ ಘಟನೆಗಳು.. ರೈಲ್ವೆ ಸೇತುವೆ ಕೆಳಗೆ ಯುವಕನ ಶವ ಪತ್ತೆ: ಜಿಲ್ಲೆಯ ಕಮಲಾಪುರ ತಾಲೂಕಿನ ಮಹಾಗಾಂವ್ ಮತ್ತು ಸಿರಡೋಣ ಮಧ್ಯದ ರೈಲ್ವೆ ಸೇತುವೆ ಕೆಳಗಡೆ ಅಪರಿಚಿತ ಯುವಕನ ಶವ ಪತ್ತೆಯಾಗಿದೆ. ಶವ ಕೊಳೆತ ಸ್ಥಿತಿಯಲ್ಲಿ ಇದ್ದುದರಿಂದ ಮೃತನ ಬಗ್ಗೆ ಇಲ್ಲಿವರೆಗೆ ಯಾವುದೇ ಗುರುತು ಸಿಕ್ಕಿಲ್ಲ. ಅಂದಾಜು 25 ವರ್ಷ ಆಸುಪಾಸಿನ ವಯಸ್ಸಿನ ಯುವಕನಾಗಿದ್ದು, ಚೆಕ್ಸ್ ಶರ್ಟ್ ಧರಿಸಿದ್ದಾನೆ.

ಶವ ಕೊಳೆತು ಸುಮಾರು ಒಂದು ಕಿ.ಮೀ ವರೆಗೆ ದುರ್ವಾಸನೆ ಬೀರುತ್ತಿತ್ತು. ಬೀದರ್-ಕಲಬುರಗಿ ರೈಲು ಪ್ರಯಾಣದ ವೇಳೆ ಕೆಳಗಡೆ ಬಿದ್ದು ಸಾವನ್ನಪ್ಪಿರಬಹುದು ಎಂದು ವಾಡಿ ರೈಲ್ವೆ ಪಿಎಸ್‌ಐ ಎಂ.ಪಾಶಾ ಸಂಶಯ ವ್ಯಕ್ತಪಡಿದ್ದಾರೆ. ಸದ್ಯ ಈ ಕುರಿತು ವಾಡಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಕಬ್ಬು ಬೆಳೆಗಾರರ ಕೂಗಿಗೆ ಸ್ಪಂದಿಸಿದ ಸಚಿವ ಸಂಪುಟ ಸಭೆ: ಸುದೀರ್ಘ 3 ಗಂಟೆ ಚರ್ಚೆ*

Spread the love ಕಬ್ಬು ಬೆಳೆಗಾರರ ಕೂಗಿಗೆ ಸ್ಪಂದಿಸಿದ ಸಚಿವ ಸಂಪುಟ ಸಭೆ: ಸುದೀರ್ಘ 3 ಗಂಟೆ ಚರ್ಚೆ* *ವಿಧಾನಸೌಧದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ