ಬೆಂಗಳೂರು: ಹೆಚ್‌ಡಿಕೆ ಆಲ್‌ಮೋಸ್ಟ್ ವಿಪಕ್ಷ ನಾಯಕ ಆಗಿದ್ದಾರೆ, ಅದಕ್ಕೆ ಮಾತಾಡ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ. ಐಟಿ ದಾಳಿ ಸಂಬಂಧ ಹೆಚ್‌ಡಿಕೆ ಆರೋಪ ಮಾಡಿರುವ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ದಾಖಲೆಗಳಿದ್ದರೆ, ಪೆನ್‌ಡ್ರೈವ್, ಡೈರಿ ಎಲ್ಲಾ ಅಮಿತ್ ಶಾಗೆ ಕೊಡಿ ಎಂದು ಸಾಲು ಹಾಕಿದ್ದಾರೆ.
ವಿಪಕ್ಷದಲ್ಲಿರೋರನ್ನು ಟಾರ್ಗೆಟ್ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಗುಜರಾತ್ ಸೇರಿ ಎಲ್ಲಾ ಕಡೆ ವಿಪಕ್ಷಗಳ ಮೇಲೆ ರೇಡ್ ಮಾಡ್ತಿದ್ದಾರೆ. ಎಷ್ಟು ಜನಬಿಜೆಪಿಯವರ ಮೇಲೆ ರೇಡ್ ಆಗಿದೆ?ಲೆಕ್ಕ ತಗೊಳ್ಳಿ ಐಟಿ, ಇಡಿ ರೇಡ್‌ಗೆಲ್ಲಾ ನಾವು ಬಗ್ಗೋರಲ್ಲ, ಜಗ್ಗೋರಲ್ಲ. ಗಾಳಿಯಲ್ಲಿ ಗುಂಡು ಹೊಡೆಯೋದಕ್ಕಿಂತ ಸಾಕ್ಷಿ ಕೊಡಿ ಎಂದು ಹೆಚ್‌ಡಿಕೆ ಹಾಗೂ ಬಿಜೆಪಿಗೆ ಸವಾಲು ಹಾಕಿದ್ದಾರೆ.
ಬಿಜೆಪಿಯಲ್ಲಿ ಯಾರು ಲೀಡರ್ ಅಂತಾನೆ ಗೊತ್ತಾಗ್ತಿಲ್ಲ. ಜನತಾದಳ ಜನತೆ ಜೊತೆಯೂ ಇಲ್ಲ, ದಳವಾಗಿಯೂ ಉಳಿದಿಲ್ಲ. ತನಿಖಾ ಸಂಸ್ಥೆಗಳನ್ನ ದುರುಪಯೋಗ ಮಾಡಿಕೊಳ್ಳೋದನ್ನು ಬಿಟ್ರೆ, ಬೇರೆ ಏನಾದ್ರೂ ಬಿಜೆಪಿಯವರಿಗೆ ಬರುತ್ತಾ? ಯಾವುದಾದ್ರೂ 10 ಯೋಜನೆಗಳನ್ನು ಹೇಳಲಿ ನೋಡೋಣ ಎಂದಿದ್ದಾರೆ.
ಕಮಿಷನ್, ಕಲೆಕ್ಷನ್ ಗೆಲ್ಲಾ ದಾಖಲೆ ಕೊಡಿ, ನಾವು ದಾಖಲೆ ಇಟ್ಟೇ 40% ಕಮಿಷನ್ ಆರೋಪ ಮಾಡಿದ್ದು, ಪೆನ್ ಡ್ರೈವ್ ಎಲ್ಲೋಯ್ತು ಸರ್? ದಾಖಲೆ ಇದ್ದರೆ ಅಮಿತ್ ಶಾ ಅವರ ಭೇಟಿ ಮಾಡಿ ಅವರ ಕೈಗಿಡಲಿ ಎಂದಿದ್ದಾರೆ.