Breaking News

ಭಾರತ ಪಾಕಿಸ್ತಾನ ಪಂದ್ಯ: ಅಹಮದಾಬಾದ್‌ ತಲುಪಿದ ಸಚಿನ್​ ತೆಂಡೂಲ್ಕರ್, ಅನುಷ್ಕಾ ಶರ್ಮಾ, ಅರಿಜಿತ್ ಸಿಂಗ್​ – ವಿಡಿಯೋ!

Spread the love

ಭಾರತ ಪಾಕಿಸ್ತಾನ ಪಂದ್ಯ ಹಿನ್ನೆಲೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್, ನಟಿ ಅನುಷ್ಕಾ ಶರ್ಮಾ, ಗಾಯಕ ಅರಿಜಿತ್ ಸಿಂಗ್, ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಈಗಾಗಲೇ ಅಹಮದಾಬಾದ್​ ತಲುಪಿದ್ದಾರೆ.

ಇಂದು ಅಕ್ಟೋಬರ್ 14…. ಕ್ರಿಕೆಟ್ ಮಹಾಯುದ್ಧ ನಡೆಯಲಿದೆ.

ವಿಶ್ವಕಪ್ 2023ರ 12ನೇ ಪಂದ್ಯ ಇಂದು ಅಹಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಂಡೋ ಪಾಕ್​​ ತಂಡಗಳು ಮೈದಾನದಲ್ಲಿ ಮುಖಾಮುಖಿ ಆಗಲಿದೆ. ಎರಡೂ ತಂಡಗಳು ಭರ್ಜರಿ ಪೈಪೋಟಿ ನಡೆಸಲಿವೆ.

 

 

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭಗೊಳ್ಳಲಿದ್ದು, ಈಗಾಗಲೇ ಕ್ರಿಕೆಟ್​ ಪ್ರಿಯರು ಸೇರಿದಂತೆ ಗಣ್ಯರು ಮೈದಾನದತ್ತ ಆಗಮಿಸಲು ಆರಂಭಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಪ್ರತಿಯೊಬ್ಬರ ಗಮನ ಇಂದಿನ ಪಂದ್ಯದ ಮೇಲಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋಗಳು ವೈರಲ್ ಆಗುತ್ತಿವೆ.

 

 

ಇಂದಿನ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲು ಟೀಂ ಇಂಡಿಯಾ ಫುಲ್ ಫಾರ್ಮ್​​​ನಲ್ಲಿದೆ. ದೇಶಾದ್ಯಂತ ಟೀಂ ಇಂಡಿಯಾಕ್ಕೆ ಆಶೀರ್ವಾದ ಸಿಗುತ್ತಿದೆ. ಎಲ್ಲೆಡೆ ಪೂಜೆ, ಹೋಮ ಹವನ ನಡೆಸಲಾಗುತ್ತಿದೆ. ಭಾರತ ಗೆಲ್ಲಲು ಪ್ರತಿಯೊಬ್ಬ ಪ್ರಜೆ ಪ್ರಾರ್ಥನೆ ಮಾಡುತ್ತಿದ್ದಾರೆ. ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರು ಕ್ರಿಕೆಟ್​​ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಪತ್ನಿ, ಬಾಲಿವುಡ್​​ ನಟಿ ಅನುಷ್ಕಾ ಶರ್ಮಾ ಜೊತೆಗಿನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾಗೆ ಆಲ್ ದಿ ಬೆಸ್ಟ್ ಎಂದು ತಿಳಿಸಿದ್ದಾರೆ.

 

 

ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಬಾಲಿವುಡ್​​ ಬಹುಬೇಡಿಕೆ ನಟಿ ಅನುಷ್ಕಾ ಶರ್ಮಾ ಕಾಣಿಸಿಕೊಂಡಿದ್ದಾರೆ. ಕಂಪ್ಲೀಟ್​ ಬ್ಲ್ಯಾಕ್​ ಡ್ರೆಸ್​​ನಲ್ಲಿ ಕಂಗೊಳಿಸುತ್ತಿದ್ದ ನಟಿಯ ವಿಡಿಯೋವನ್ನು ಪಾಪರಾಜಿಗಳು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ದೃಶ್ಯ ಸಖತ್​ ವೈರಲ್​ ಆಗುತ್ತಿದೆ. ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೂಡ ಅಹಮದಾಬಾದ್ ತಲುಪಿ, ಟೀಮ್ ಇಂಡಿಯಾಗೆ ಶುಭ ಹಾರೈಸಿದ್ದಾರೆ. ಭಾರತ-ಪಾಕ್ ಪಂದ್ಯಕ್ಕೂ ಮುನ್ನ ನಡೆಯಲಿರುವ ಸಮಾರಂಭದಲ್ಲಿ ಗಾಯಕ ಅರಿಜಿತ್ ಸಿಂಗ್​​ ತಮ್ಮ ಗಾಯನದಿಂದ ಮೋಡಿ ಮಾಡಲಿದ್ದಾರೆ. ಗಾಯಕ ಕೂಡ ಅಹಮದಾಬಾದ್ ತಲುಪಿದ್ದು, ಇವರೆಲ್ಲರ ಫೋಟೋ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

 

 

 

 

 

ಕ್ರಿಕೆಟ್ ವಿಶ್ವಕಪ್ 2023ರ ಭಾರತ ಮತ್ತು ಪಾಕಿಸ್ತಾನದ ಮೊದಲ ಪಂದ್ಯ ಇಂದು ಮಧ್ಯಾಹ್ನ 2 ಗಂಟೆಗೆ ಆರಂಭ ಆಗಲಿದೆ. ಕಾನ್ಪುರ ಮತ್ತು ಉತ್ತರಾಖಂಡದಲ್ಲಿ ಟೀಂ ಇಂಡಿಯಾ ಗೆಲುವಿಗಾಗಿ ಹೋಮ ಹವನ ನಡೆಸಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳು ವೈರಲ್​ ಆಗಿವೆ. ದೇಶದ ಹಲವೆಡೆ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ದೇಶವಾಸಿಗಳು ಟೀಂ ಇಂಡಿಯಾಗೆ ಶುಭ ಹಾರೈಸುತ್ತಿದ್ದಾರೆ. ಈಟಿವಿ ಭಾರತ ಪರವಾಗಿಯೂ ಇಂದಿನ ಮಹತ್ವದ ಪಂದ್ಯಕ್ಕೆ ಟೀಂ ಇಂಡಿಯಾಗೆ ಶುಭ ಹಾರೈಕೆಗಳು.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ