Breaking News

ಬೆಳಗಾವಿಯಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸುತ್ತಿರುವ ಗಣೇಶ

Spread the love

ಬೆಳಗಾವಿ: ಅದೆಷ್ಟೋ ಮಕ್ಕಳು ಮನೆಯಲ್ಲಿ ಬಡತನ ಸೇರಿದಂತೆ ಮತ್ತಿತರ ಕಾರಣಗಳಿಂದ ಕಲಿಕೆಯಿಂದ ದೂರ ಉಳಿಯುತ್ತಿದ್ದಾರೆ. ಇಂತ‌ಹ ಮಕ್ಕಳು ಅಡ್ಡದಾರಿ‌ ಹಿಡಿದು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಬಾರದು ಎಂದು ಬೆಳಗಾವಿಯಲ್ಲಿ ಗಣೇಶ ಮೂರ್ತಿಯ ಮೂಲಕ ಶೈಕ್ಷಣಿಕ ಜಾಗೃತಿ ಮೂಡಿಸುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ.

ಹೌದು, ಇಡೀ ರಾಜ್ಯದಲ್ಲೇ ವಿಶೇಷವಾಗಿ ಬೆಳಗಾವಿಯಲ್ಲಿ ಗಣೇಶೋತ್ಸವ ಆಚರಿಸಲಾಗುತ್ತದೆ. ಇಲ್ಲಿನ ಗಣೇಶ ಮಂಡಳಿಗಳು ಸಾಮಾಜಿಕ, ಆಧ್ಯಾತ್ಮಿಕ, ಆರೋಗ್ಯ ಸೇವೆ ಸಲ್ಲಿಸುವ ಜೊತೆಗೆ ಶಿಕ್ಷಣದ ಮಹತ್ವವನ್ನು ಸಾರುತ್ತಿವೆ. ಕುಲಕರ್ಣಿ ಗಲ್ಲಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿ ಇಂತಹದ್ದೊಂದು ವಿಭಿನ್ನ ಕಾರ್ಯಕ್ಕೆ ಮುಂದಾಗಿದೆ. ಬಾಲಕನೋರ್ವ ತನ್ನ ತಲೆ ಮೇಲೆ ಹೊತ್ತಿರುವ ಮೂಟೆಯನ್ನು ಗಣಪ ತನ್ನ ಕೈಗಳಿಂದ ತೆಗೆದುಕೊಳ್ಳಲು ಮುಂದಾಗಿರುವ ಮೂಲಕ ಬಾಲ ಕಾರ್ಮಿಕ ಪದ್ಧತಿಯನ್ನು ನಿಲ್ಲಿಸಬೇಕೆಂಬ ಸಂದೇಶ ಸಾರುವ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಅಲ್ಲಿಯೇ ಕೆಳಗೆ ಬಾಲಕಿ ಪಾತ್ರೆ ತೊಳೆಯುತ್ತಿರುವುದು, ಮತ್ತೊಂದೆಡೆ ಬಾಲಕ ಇಟ್ಟಿಗೆ ಹೊತ್ತಿರುವುದು, ಯುವಕನೊಬ್ಬ ಕಳ್ಳತನ ಕೃತ್ಯವೆಸಗಿ ಓಡಿ ಹೋಗುತ್ತಿರುವುದು ಕಂಡು ಬಂದರೆ, ಇನ್ನೊಂದೆಡೆ ವಿದ್ಯೆ ಕಲಿತರೆ ವಿಜ್ಞಾನಿ, ವೈದ್ಯ, ವಕೀಲ, ಎಂಜಿನಿಯರ್ ಸೇರಿ ಉನ್ನತ ಸ್ಥಾನಗಳನ್ನು ಪಡೆಯಬಹುದು ಎಂಬುದನ್ನು ಅತ್ಯಂತ ಅರ್ಥಪೂರ್ಣ ಚಿತ್ರಗಳ ಮೂಲಕ ಮಂಡಳಿಯವರು ಪ್ರದರ್ಶಿಸಿದ್ದಾರೆ.

ದೇಶವು ಅದೆಷ್ಟೇ ಅಭಿವೃದ್ಧಿ ಹೊಂದಿದರೂ ಬಾಲಕಾರ್ಮಿಕ‌ ಪದ್ಧತಿ ಮಾತ್ರ ಇನ್ನೂ ಜೀವಂತವಾಗಿದ್ದು, ಇದು ನಿರ್ಮೂಲನೆ ಆಗಬೇಕು ಎಂಬ ಸಂದೇಶದ ಬರಹಗಳು ಎಲ್ಲರನ್ನೂ ಜಾಗೃತಿಗೊಳಿಸುತ್ತಿವೆ. ಈ ದೃಶ್ಯ ಕಣ್ತುಂಬಿಕೊಳ್ಳಲು ದಿನನಿತ್ಯ ನೂರಾರು ಜನರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಪ್ರತಿವರ್ಷವೂ ಇದೇ ರೀತಿ ಒಂದಿಲ್ಲೊಂದು ವಿಷಯವನ್ನು ಇಟ್ಟಿಕೊಂಡು ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿರುವ ಕುಲಕರ್ಣಿ ಗಲ್ಲಿ ಗಣೇಶ ಮಂಡಳಿಯವರು ಈ ಬಾರಿಯೂ ತಮ್ಮ ಪರಂಪರೆ ಮುಂದುವರಿಸಿಕೊಂಡು ಬಂದಿದ್ದಾರೆ.

ಈಟಿವಿ ಭಾರತ ಜೊತೆಗೆ ಮಂಡಳಿ ಅಧ್ಯಕ್ಷ ಸತೀಶ್​ ಗೌರಗೊಂಡ ಮಾತನಾಡಿ, ಇನ್ನು ಕೂಡ ಬಾಲಕಾರ್ಮಿಕ ಪದ್ಧತಿ ಸಮಾಜದಲ್ಲಿ ಜೀವಂತವಾಗಿ ಉಳಿದುಕೊಂಡಿದ್ದು ದುರ್ದೈವ. ಹಾಗಾಗಿ, ಪಾಲಕರು ತಮಗೆ ಎಷ್ಟೇ ಕಷ್ಟವಾದರೂ ಮಕ್ಕಳನ್ನು ಶಾಲೆ ಬಿಡಿಸಬಾರದು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದರೆ, ಅವರು ತಮ್ಮ ಮನೆಗೆ ಅಷ್ಟೇ ಅಲ್ಲದೇ ಇಡೀ ದೇಶಕ್ಕೆ ದೊಡ್ಡ ಆಸ್ತಿಯಾಗುತ್ತಾರೆ. ಆ ನಿಟ್ಟಿನಲ್ಲಿ ಜನರಿಗೆ ಸಂದೇಶ ನೀಡುವ ಜೊತೆಗೆ ಬಡ ಮಕ್ಕಳಿಗೆ ಆರ್ಥಿಕ ಸಹಾಯವನ್ನು ನಮ್ಮ‌ ಮಂಡಳಿ ಮಾಡುತ್ತಿದೆ. ಅಲ್ಲದೇ ಆರೋಗ್ಯ ಶಿಬಿರವನ್ನು ಆಯೋಜಿಸುತ್ತೇವೆ. ಕೋವಿಡ್ ಸಮಯದಲ್ಲೂ‌ ಸಾಕಷ್ಟು ಜನರಿಗೆ ನೆರವಿನ‌ ಹಸ್ತ ಚಾಚಿದ್ದೆವು ಎಂದರು.

ಗಣೇಶ ದರ್ಶನಕ್ಕೆ ಆಗಮಿಸಿದ್ದ ಖಾಸಗಿ ಸಂಸ್ಥೆಯ ಉದ್ಯೋಗಿ ಸಂತೋಷ ಮಾತನಾಡಿ, ಪ್ರತಿಯೊಬ್ಬರಿಗೂ ಶಿಕ್ಷಣ ಅತ್ಯಂತ ಅವಶ್ಯಕ.‌ ಮಕ್ಕಳು ಬಾಲಕಾರ್ಮಿಕರಾದರೆ ಅವರ ಇಡೀ‌ ಭವಿಷ್ಯ ಹಾಳಾಗುತ್ತದೆ ಎಂಬುದನ್ನು ಬಹಳ ಅದ್ಭುತವಾಗಿ ಗಣೇಶ ಮೂರ್ತಿಯ ಮೂಲಕ ತಿಳಿಸಿಕೊಟ್ಟಿದ್ದಾರೆ. ಎಲ್ಲರೂ ಇಲ್ಲಿಗೆ ಬಂದು ಗಣೇಶನ ದರ್ಶನ ಪಡೆದುಕೊಳ್ಳುವ ಜೊತೆಗೆ ಶಿಕ್ಷಣದ ಮಹತ್ವವನ್ನು ತಿಳಿದುಕೊಳ್ಳಬಹುದು ಎಂದರು. ಒಟ್ಟಾರೆ ಬೆಳಗಾವಿ ಗಣೇಶ ಮೂರ್ತಿಗಳು ಒಂದಕ್ಕಿಂತ ಒಂದು ಚೆಂದ ಮತ್ತು ಅರ್ಥಪೂರ್ಣವಾಗಿವೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ