ಬೆಳಗಾವಿ ಜಿಲ್ಲಾ ಪದವಿಪೂರ್ವ ಇಲಾಖೆ ಹಾಗೂ ಎಕ್ಸ್ಪರ್ಟ್ ಪಿ ಯು ಸಿ ಕಾಲೇಜ್ ಇವರ ಸಂಯುಕ್ತ ಆಶ್ರಯದಲ್ಲಿ PUC ವಿದ್ಯಾರ್ಥಿಗಳಿಗೆ
ಜಿಲ್ಲಾ ಮಟ್ಟದ ಸೈಕಲಿಂಗ್ ( cycling) ಮತ್ತು Cross Country ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತಾನಾಡಿದ ಶ್ರೀ ಸುರೇಶ ಪೌoಡೆಶನ್ ಅಧ್ಯಕ್ಷರಾದ ಶ್ರೀ ಸುರೇಶ ಯಾದವ ಅವರು ಈಗಿನ ವಿದ್ಯಾರ್ಥಿಗಳಲ್ಲಿ ಸ್ಪೋರ್ಟ್ಸ್ ದ ಬಗ್ಗೆ ಕಾಳಜಿ ಕಡಿಮೆಯಾಗಿ ಕೇವಲ ಮೊಬೈಲ್ ಉಪಯೋಗ ಹೆಚ್ಚಾಗಿದೆ. ಇಂತ ಸಮಯದಲ್ಲಿ ಇಲಾಖೆ ಮತ್ತು ಕಾಲೇಜದವರು ಸೈಕಲಿಂಗ್ ಸ್ಪರ್ಧೆ ಏರ್ಪಡಿಸಿರುವುದು ಒಳ್ಳೆಯ ವಿಚಾರ,
ಸೈಕಲನ್ನು ನಿಯಮಿತವಾಗಿ ಮಾಡುವುದರಿಂದ ನಮ್ಮ ಉಸಿರಾಟವು ಸುಧಾರಿಸುತ್ತದೆ. ಹೃದಯ ಮತ್ತು ಉಸಿರಾಟದ ತೊಂದರೆಗಳು ದೂರವಾಗುತ್ತವೆ. ಸೈಕೆಲಿಂಗ ವೇಗವಾಗಿ ಕೊಬ್ಬನ್ನು ಕರಗಿಸುತ್ತದೆ. ಮತ್ತು ತೂಕವನ್ನು ವೇಗವಾಗಿ ಕಳೆದುಕೊಳಲು ಸಹಾಯ ಮಾಡುತ್ತದೆ. ಅಧಿಕ ತೂಕದಿಂದ ಬಳಲುತ್ತಿರುವವರಿಗೆ ಸೈಕೆಲಿಂಗ ತುಂಬಾ ಪ್ರಯೋಜನಕಾರಿಯಾಗಿದೆ. ಎಂದರು.