ಬಾಗಲಕೋಟೆ: ಚೈತ್ರಾ ಕುಂದಾಪುರ ಟಿಕೆಟ್ ಡೀಲ್ ಪ್ರಕರಣದ ಹಿನ್ನೆಲೆ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಚೈತ್ರಾ ಕುಂದಾಪುರ ಅವರಿಗೆ ಸೇರಿದ ಕಾರು ಪತ್ತೆಯಾಗಿದೆ. ಈ ಪ್ರಕರಣ ಮುಧೋಳ ಪಟ್ಟಣದವರೆಗೆ ವ್ಯಾಪಿಸಿದ್ದು ನೋವಿನ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅರ್ ಬಿ ತಿಮ್ಮಾಪುರ ಹೇಳಿದ್ದಾರೆ.
ಬಾಗಲಕೋಟೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಟಿಕೆಟ್ ಡೀಲ್ನಲ್ಲಿ ದೊಡ್ಡ ಜಾಲವೇ ಇರಬಹುದು ಎಂಬ ಭಾವನೆ ನನ್ನದು. ಕುಂದಾಪುರ ಎಲ್ಲಿ, ಮುಧೋಳ ಎಲ್ಲಿ, ಪೊಲೀಸ್ ಇಲಾಖೆ ಅಧಿಕಾರಿಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರದಲ್ಲಿ ಕಾರು ಇದೆ. ಅದನ್ನು ತೆಗೆದುಕೊಂಡು ಬನ್ನಿ ಎಂದು ಅವರ ಪಿಎಗೆ ಹೇಳಿದ ಮೇರೆಗೆ ಸೊಲ್ಲಾಪುರದಿಂದ ಮುಧೋಳ ನಗರಕ್ಕೆ ಅವರ ಆಪ್ತ ಕಿರಣ್ ಎಂಬಾತ ತೆಗೆದುಕೊಂಡು ಬಂದಿದ್ದಾನೆ ಎಂದು ಹೇಳಿದರು.
ಚೈತ್ರಾ ಕುಂದಾಪುರ ಟಿಕೆಟ್ ಡೀಲ್ ಪ್ರಕರಣದ ಹಿಂದೆ ಬಹು ದೊಡ್ಡ ಜಾಲ ಇದ್ದು, ಎಲ್ಲಿಲ್ಲಿ ಹರಡಿದೆಯೋ ಗೊತ್ತಿಲ್ಲ, ಬೇರೆ ರಾಜ್ಯದಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಇಂತಹ ಕೆಲಸ ಮಾಡಿಕೊಂಡು, ಆ ಪಕ್ಷದಲ್ಲಿ, ಹಿಂದು ಸಂಘಟನೆ ಇದ್ದುಕೊಂಡು ಪ್ರಜಾಪ್ರಭುತ್ವ ಧಕ್ಕೆ ತರುವಂತಹ ಕೆಲಸ ಮಾಡುತ್ತಿರುವುದು ದುರದೃಷ್ಟಕರ ಎಂದು ಸಚಿವರು ಹೇಳಿದರು.