ಇದು ಸರ್ಕಾರದ ಆರ್ಡರ್ ಅಲ್ಲ.ಇದು ಪ್ರಸ್ತಾವನೆ ಪತ್ರ
ಇದು ಬೆಳಗಾವಿ ಜಿಲ್ಲಾಧಿಕಾರಿಗಳು ನಿನ್ನೆ ರಾತ್ರಿ ಸರ್ಕಾರಕ್ಕೆ ಕಳುಹಿಸಿರುವ ಪ್ರಸ್ತಾವನೆ ಪತ್ರ ಅಷ್ಟೆ, ಸರ್ಕಾರ ಇದಕ್ಕೆ ಅನುಮತಿ ನೀಡಿಲ್ಲ.ಹೀಗಾಗಿ ಸರ್ಕಾರದ ಆದೇಶದ ಪ್ರಕಾರ ಇಂದು ಸೋಮವಾರವೇ ರಜೆ ಮಂಗಳವಾರ ವರ್ಕಿಂಗ್ ಡೇ ಈ ಪ್ರಸ್ತಾವಣೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ವದಂತಿಗಳನ್ನು ಹರಡಿಸುತ್ತಿದ್ದಾರೆ.
ಸರ್ಕಾರದ ಆದೇಶದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.ಸರ್ಕಾರದಿಂದ ಪರಿಷ್ಕೃತ ಆದೇಶವೂ ಬಂದಿಲ್ಲ.ಆದ್ರೆ ಕೆಲವರು ಬೆಳಗಾವಿ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಕಳುಹಿಸಿರುವ ಪ್ರಸ್ತಾವನೆಯನ್ನು ಸರ್ಕಾರದ ಪರಿಷ್ಕೃತ ಆದೇಶ ಎಂದು ವಂದಂತಿಗಳನ್ನು ಹರಡಿಸುತ್ತಿದ್ದಾರೆ.
ಸೋಮವಾರವೇ ಸರ್ಕಾರಿ ರಜೆ ಇದ್ದು ಮಂಗಳವಾರ ಎಂದಿನಂತೆ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತವೆ.ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸ್ಪಷ್ಡಪಡಿಸಿದ್ದಾರೆ.