ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಅವರು ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಗಣೇಶ ಹಬ್ಬದಂದು ಧ್ರುವ ಪತ್ನಿ ಪ್ರೇರಣಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಬಸವನಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ ಇದೇ ಖುಷಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ನಟ ಧ್ರುವ ಸರ್ಜಾ
ಗಣೇಶ ಹಬ್ಬದ ದಿನ ಮನೆಗೆ ಮಗ ಬಂದಿದ್ದಾನೆ. ಮನೆಯಲ್ಲಿ ಎಲ್ಲರೂ ಖುಷಿಯಾಗಿದ್ದಾರೆ. ಮಗ ಹುಟ್ಟಿದ ತಕ್ಷಣ ಫೋನ್ ತೆಗೆದು ಚಿರು ನಂಬರ್‌ಗೆ ಡಯಲ್ ಮಾಡಲು ಹೋಗಿದ್ದೆ, 2 ನಿಮಿಷ ಬೇಕಾಯ್ತು ಸುಧಾರಿಸಿಕೊಳ್ಳಲು ಎಂದು ನಟ ಭಾವುಕರಾಗಿದ್ದಾರೆ
ಇವತ್ತು 11 ಕಡೆ ಗಣೇಶನ ದರ್ಶನ ಮಾಡಲು ಹೋಗಬೇಕಿತ್ತು. ಆದರೆ ಮುಂದೆ ಮಾಡ್ತಿನಿ, ಮಗನ ಆಗಮನ ಖುಷಿ ಕೊಟ್ಟಿದೆ. ತಾಯಿ ಮತ್ತು ಮಗ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಧ್ರುವ ಮಾತನಾಡಿದ್ದಾರೆ.