ರಾಯಬಾಗದಲ್ಲಿ 400 ಕೆ.ವಿ. ವಿತರಣಾ ಕೇಂದ್ರ ಸ್ಥಾಪಿಸಲು ಮಂಜೂರಾತಿ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ : ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ಕವಿಪ್ರನಿನಿಯ 90 ನೇ ತಾಂತ್ರಿಕ ಸಮನ್ವಯ ಸಮಿತಿ ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ವ್ಯಾಪ್ತಿಯಲ್ಲಿ ಹೊಸದಾಗಿ ಅಂದಾಜು 800 ಕೋಟಿ ವೆಚ್ಚದಲ್ಲಿ 400 ಕೆ.ವ್ಹಿ ವಿತರಣಾ ಕೇಂದ್ರವನ್ನು ಸ್ಥಾಪಿಸುವ ಸಂಬಂಧ ಸಲ್ಲಸಲಾದ ಪ್ರಸ್ತಾವನೆಗೆ ಮಂಜೂರು ದೊರಕಿದೆ ಲೋಕೋಪಯೋಗಿ ಸಚಿವರು , ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ
ಈ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸುವುದರಿಂದ ಜಿಲ್ಲೆಯ ವಿತರಣಾ ವ್ಯವಸ್ಥೆಯು ಸಧೃಡಗೊಳ್ಳುವುದಲ್ಲದೇ ಎಲ್ಲ ಜನತೆಗೆ ಇದರ ಉಪಯೋಗವಾಗುವುದೆಂದು ತಿಳಿಸಿದರು.
ನಮ್ಮ ಸರಕಾರವು ಜಿಲ್ಲೆಯ ಜನರ ಬಹಳ ದಿನಗಳ ಬೇಡಿಕೆಯನ್ನು ಪೂರೈಸಿದ್ದು ಇದನ್ನು ಈಡೇರಿಸಿದ್ದಕ್ಕೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಹಾಗೂ ಇಂಧನ ಸಚಿವರಾದ ಕೆ ಜೆ ಜಾರ್ಜ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.