Breaking News

ಬೆಂಗಳೂರಿನಲ್ಲಿ ₹7 ಕೋಟಿಗಿಂತ ಹೆಚ್ಚು ಮೌಲ್ಯದ ಮಾದಕವಸ್ತು ವಶ: ವಿದೇಶಿಗ ಸೇರಿ 14 ಮಂದಿ ಆರೋಪಿಗಳ ಬಂಧನ

Spread the love

ಬೆಂಗಳೂರು: ಡ್ರಗ್ಸ್​ ಮಾಫಿಯಾ ವಿರುದ್ಧ ಸಮರ ಸಾರಿರುವ ನಗರ ಸಿಸಿಬಿ ಪೊಲೀಸರು ಏಳು ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿ 14 ಮಂದಿ ದಂಧೆಕೋರರನ್ನು ಬಂಧಿಸಿದ್ದಾರೆ.

ಅವರಿಂದ 7 ಕೋಟಿಗಿಂತ ಹೆಚ್ಚು ಮೌಲ್ಯದ ತರಹೇವಾರಿ ಮಾದಕವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಡುಗೋಡಿ, ವಿದ್ಯಾರಣ್ಯಪುರ, ವರ್ತೂರು, ಬನಶಂಕರಿ ಹಾಗೂ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ನಡೆಸಿ ಮೂವರು ವಿದೇಶಿ ಪ್ರಜೆ ಸೇರಿದಂತೆ 14 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಐರನ್ ಟೇಬಲ್, ಸಿರಿಂಜ್​ ಮೂಲಕ ಸ್ಮಗ್ಲಿಂಗ್​: 2012ರಲ್ಲಿ ಬೆಂಗಳೂರಿಗೆ ಬಂದಿದ್ದ ನೈಜೀರಿಯಾ ಫ್ರಾನ್ಸಿನ್ ಬೆಂಗಳೂರಿಗೆ ಹೊಸ ಮಾದರಿಯ ಡ್ರಗ್ಸ್​ ಪರಿಚಯಿಸುವುದಕ್ಕೆ ಮುಂದಾಗಿದ್ದ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಈತ ಡೀಲ್ ಮಾಡ್ತಿದ್ದ ಡ್ರಗ್ಸ್​ಅನ್ನ ಜಪ್ತಿ ಮಾಡಿದ್ದು, ಈತನ ಬಳಿಯೇ ಮೂರುವರೆ ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್​ ಸಿಕ್ಕಿದೆ. ಇನ್ನು ಈತನ ಸ್ಮಗ್ಲಿಂಗ್ ಸ್ಟೈಲ್ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಐದಾರು ಐರನ್ ಟೇಬಲ್​ಗಳನ್ನ ಆನ್ ಲೈನ್​ನಲ್ಲಿ ಆರ್ಡರ್ ಮಾಡ್ತಿದ್ದ ಆರೋಪಿ ಮರದ ಮಧ್ಯ ಸೀಳಿ ಅದರಲ್ಲಿ ಡ್ರಗ್ಸ್​​ ತುಂಬಿ ಮತ್ತೆ ವ್ಯವಸ್ಥಿತವಾಗಿ ಪ್ಯಾಕ್ ಮಾಡ್ತಿದ್ದ. ಮಾಲ್ ಇದ್ದ ಟೇಬಲ್ ಮಧ್ಯೆ ಐದಾರು ಟೇಬಲ್​ಗಳನ್ನು ಒಟ್ಟಿಗೆ ಇಟ್ಟು ಪಾರ್ಸಲ್ ಕಳಿಸ್ತಿದ್ದ. ಈತನ ಜಾಡು ಬೆನ್ನಟ್ಟಿದ್ದ ಸಿಸಿಬಿ ಟೀಂ ಆರೋಪಿಯನ್ನು ಮಾದಕ ವಸ್ತು ಸಮೇತ ಬಂಧಿಸಿದ್ದಾರೆ.

 

 

ಹ್ಯಾಶಿಷ್​ ಆಯಿಲ್ ಸಾಗಿಸುತ್ತಿದ್ದ ನಾಲ್ವರ ಬಂಧನ: ಮತ್ತೊಂದು ಪ್ರಕರಣದಲ್ಲಿ ಆಂಧ್ರ ಪ್ರದೇಶದಿಂದ ನಗರಕ್ಕೆ‌ ಹ್ಯಾಶಿಷ್​ ಆಯಿಲ್ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. ಆಂಧ್ರದಿಂದ ಡಬ್ಬದಲ್ಲಿ ಹ್ಯಾಶಿಷ್​ ಆಯಿಲ್​ ತರಿಸುತ್ತಿದ್ದ ಆರೋಪಿಗಳು ವಿಭಿನ್ನವಾಗಿ ಸ್ಮಗ್ಲಿಂಗ್ ಮಾಡುತ್ತಿದ್ದರು. ಇಂಜೆಕ್ಷನ್ ಸಿರಿಂಜ್​ನಲ್ಲಿ ಬಳಸುತ್ತಿದ್ದ ಆರೋಪಿಗಳು, ಬಂಡೆಪಾಳ್ಯ ಬಳಿಯ ಮನೆಯೊಂದರಲ್ಲಿ ಹತ್ತು ಎಂಎಲ್‌ಎ ನಿಂದ ಐವತ್ತು ಎಂಎಲ್ ತುಂಬಿ ಮಾರಾಟ ಮಾಡುತ್ತಿದ್ದರು. ಈ ಹೊಸ ಟೆಕ್ನಿಕ್ ಬಳಸಿದ್ದ ಒಡಿಶಾ ಮೂಲದ ಸುರೇಶ್, ಕರ್ನಾಟಕದ ಅಕ್ಷಯ್, ಆದಿತ್ಯ ಮತ್ತು ಸಾಯಿ ಚೈತನ್ಯ ಸೇರಿ ನಾಲ್ವರನ್ನ ಸಿಸಿಬಿ ಟೀಂ ಅರೆಸ್ಟ್ ಮಾಡಿ ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಹ್ಯಾಶಿಷ್ ಆಯಿಲ್ ಜಪ್ತಿ ಮಾಡಿದ್ದಾರೆ.


Spread the love

About Laxminews 24x7

Check Also

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ

Spread the love ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೊಳವಿ ಗ್ರಾಮದ ನಮ್ಮೂರ ಸರಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ