ರಾಷ್ಟ್ರೀಯ ಕ್ರೀಡಾ ದಿನದ ನಿಮಿತ್ತ ಹಾಕಿ ಬೆಳಗಾವಿ ವತಿಯಿಂದ ಖಾನಾಪುರದ ತಾರಾರಾಣಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹಾಕಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಆರಂಭದಲ್ಲಿ ಪ್ರಕಾಶ್ ಕಲ್ಕುಂದ್ರಿಕರ್ ಹಾಕಿ ಬೆಳಗಾವಿ ಅಸೋಸಿಯೇಷನ್ ಬಗ್ಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ಸುಧಾಕರ ಚಲ್ಕೆ ವಿದ್ಯಾರ್ಥಿಗಳಿಗೆ ಹಾಕಿ ಆಟದ ಬಗ್ಗೆ ವಿವರವಾದ ಮಾರ್ಗದರ್ಶನ ನೀಡುತ್ತಾ .ಹಾಕಿ ರಾಷ್ಟ್ರಮಟ್ಟದಲ್ಲಿ ಆಡುವ ಆಟವಾಗಿದ್ದು, ವಿದ್ಯಾರ್ಥಿಗಳು ಈ ಆಟವನ್ನು ಗಂಭೀರವಾಗಿ ಗಮನವಿಟ್ಟು ಆಡಿದರೆ ರಾಷ್ಟ್ರಮಟ್ಟಕ್ಕೇರಲು ಸಾಧ್ಯ.ಎಂದರು
ಶಿಕ್ಷಕಿ ಅಶ್ವಿನಿ ಪಾಟೀಲ ಮಾತನಾಡಿ ಹಾಕಿ ಬೆಳಗಾವಿ ಧನ್ಯವಾದ ಅರ್ಪಿಸಿ, ತಾರಾರಾಣಿ ವಿದ್ಯಾಲಯವು ಖಂಡಿತವಾಗಿಯೂ ಬಾಲಕಿಯರ ಹಾಕಿ ತಂಡವನ್ನು ರಚಿಸಿ ರಾಷ್ಟ್ರಮಟ್ಟಕ್ಕೆ ತಲುಪಲಿದೆ ಎಂದು ಭರವಸೆ ನೀಡಿದರು.
ಹಾಕಿ ಸಾಮಗ್ರಿ ವಿತರಣೆ ಸಂದರ್ಭದಲ್ಲಿ ಅಧ್ಯಕ್ಷ ಗೂಳಪ್ಪ ಹೊಸಮನಿ, ವಿನೋದ ಪಾಟೀಲ, ಸುಧಾಕರ ಚಳ್ಕೆ, ಮನೋಹರ ಪಾಟೀಲ, ಪ್ರಕಾಶ ಕಲ್ಕುಂದ್ರಿಕರ, ಗಣಪತ ಗಾವಡೆ, ಶಿಕ್ಷಕಿ ಅಶ್ವಿನಿ ಪಾಟೀಲ ಹಾಕಿ ಬೆಳಗಾವಿ ಅಧ್ಯಕ್ಷ ಗೂಳಪ್ಪ ಹೊಸಮನಿ, ಉಪಾಧ್ಯಕ್ಷ ವಿನೋದ ಪಾಟೀಲ, ಕಾರ್ಯದರ್ಶಿ ಸುಧಾಕರ ಚಳ್ಕೆ, ಖಜಾಂಚಿ ಮನೋಹರ ಪಾಟೀಲ, ಕಾರ್ಯಕಾರಿ ಸದಸ್ಯ ಪ್ರಕಾಶ ಕಲ್ಕುಂದ್ರಿಕರ, ಗಣಪತ ಗಾವಡೆ ಮುಖ್ಯೋಪಾಧ್ಯಾಯ ರಾಹುಲ್ ಜಾಧವ, ಶಿಕ್ಷಕಿ ಅಶ್ವಿನಿ ಪಾಟೀಲ್ ಹಾಗೂ ಶಾಲೆಯ ಸುಮಾರು 50 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.