Breaking News

ಅಕ್ರಮವಾಗಿ ಡ್ರಗ್ಸ್​ ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

Spread the love

ಬೆಂಗಳೂರು: ವಾಟ್ಸ್‌ಆಯಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಇಬ್ಬರು ಹುಳಿಮಾವು ಪೊಲೀಸರ ಬಲೆಗೆ ಬಿದ್ದಿದ್ದು, 82.57 ಲಕ್ಷ ರೂ.

ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಎಮಾನ್ಯೂವೆಲ್ ಅಫಾನ್ (43), ಉಚ್ಚೆನ್ನ ಲಿವನ್ಸ್ (36) ಬಂಧಿತರು. 82.57 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳಾದ 1,281 ಎಕ್ಟೆಸ್ಸಿ ಪಿಲ್ಸ್, 463 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಜಪ್ತಿ ಮಾಡಲಾಗಿದೆ.

ಆರೋಪಿಗಳು ನೈಜೀರಿಯಾದಿಂದ ಕಡಿಮೆ ಬೆಲೆಗೆ ಎಂಡಿಎಂಎ ಹಾಗೂ ಎಕ್ಟಸೀ ಪಿಲ್ಸ್ ಅಕ್ರಮವಾಗಿ ಬೆಂಗಳೂರಿಗೆ ತರುತ್ತಿದ್ದರು. ಬಳಿಕ ಬನ್ನೇರುಘಟ್ಟ ರಸ್ತೆ, ಎಲೆಕ್ಟ್ರಾನಿಕ್​ ಸಿಟಿ, ಹೊಸೂರು ರಸ್ತೆಗಳಲ್ಲಿ ಮಾದಕ ವ್ಯಸನಿಗಳಿಗೆ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಬೇಗೂರು ಕೊಪ್ಪ ರಸ್ತೆ ಬಳಿ ಮಾರಾಟ ಮಾಡುತ್ತಿದ್ದಾಗ ಹುಳಿಮಾವು ಪೊಲೀಸರಿಗೆ ಇವರ ಸುಳಿವು ಸಿಕ್ಕಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಆರೋಪಿಗಳು ವಾಟ್ಸ್‌ಆಯಪ್ ಮೂಲಕ ತಮ್ಮ ಗ್ರಾಹಕರನ್ನು ಸಂಪರ್ಕಿಸುತ್ತಿದ್ದರು. ಇವರು ಸೂಚಿಸುವ ಸ್ಥಳಕ್ಕೆ ಹೋಗಿ ಗ್ರಾಹಕರು ಡ್ರಗ್ಸ್ ಖರೀದಿಸುತ್ತಿದ್ದರು. ಕೆಲವೊಮ್ಮೆ ಸಣ್ಣ ಬಟ್ಟೆಯಲ್ಲಿ ಡ್ರಗ್ಸ್ ಕಟ್ಟಿ ನಿರ್ದಿಷ್ಟ ಸ್ಥಳದಲ್ಲಿ ಎಸೆದು ಅದರ ಲೊಕೇಶನ್​ಗಳನ್ನು ಗ್ರಾಹಕರಿಗೆ ಕಳುಹಿಸುತ್ತಿದ್ದರು. ಪೊಲೀಸರಿಗೆ ತಮ್ಮ ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಆರೋಪಿಗಳು ಈ ತಂತ್ರ ರೂಪಿಸುತ್ತಿದ್ದರು ಎಂದು ತಿಳಿದು ಬಂದಿದೆ. ಬಂಧಿತರ ಪೈಕಿ ಓರ್ವನ ವೀಸಾ ಅವಧಿ ಮುಕ್ತಾಯಗೊಂಡಿದೆ. ಇಬ್ಬರೂ ಡ್ರಗ್ಸ್ ದಂಧೆ ನಡೆಸಲೆಂದೇ ಬೆಂಗಳೂರಿಗೆ ಆಗಮಿಸಿದ್ದರು. ಇದೀಗ ಇವರ ಮೊಬೈಲ್ ಜಪ್ತಿ ಮಾಡಿರುವ ಪೊಲೀಸರು ಇವರಿಂದ ಡ್ರಗ್ಸ್ ಖರೀದಿಸುತ್ತಿದ್ದ ಗ್ರಾಹಕರಿಗೆ ಶೋಧ ಮುಂದುವರೆಸಿದ್ದಾರೆ.

ಕೆಲ ದಿನಗಳ ಹಿಂದೆ ಇಂತಹದ್ದೆ ಘಟನೆ ನಡೆದಿತ್ತು. ನಗರದಲ್ಲಿ ಅಕ್ರಮವಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾದ ಐವರು ಆರೋಪಿಗಳನ್ನು ದಕ್ಷಿಣ ವಿಭಾಗದ ವಿ.ವಿ.ಪುರಂ ಹಾಗೂ ಜಯನಗರ ಠಾಣೆ ಪೊಲೀಸರು ಬಂಧಿಸಿ 8 ಕೋಟಿ ರೂ ಮೌಲ್ಯದ ಡ್ರಗ್ಸ್​​ ವಶಪಡಿಸಿಕೊಂಡಿದ್ದರು. ಲಾರೆನ್ಸ್, ಚುಕ್ವೂನೇಮ್, ಹಸ್ಲೆ, ಫ್ರಾಂಕ್ ಜಾಗೂ ಹಾಗು ಇಮ್ಯಾನ್ಯುಲ್ ನಾಝಿ ಡ್ರಗ್ಸ್​ ಮಾರಾಟ ಮಾಡುತ್ತಿದ್ದರು.

ಇವರಲ್ಲಿ ಇಬ್ಬರು ವಿದೇಶಿಗರು ಮೆಟ್ರೋ‌ ಸ್ಟೇಷನ್‌ ಸಮೀಪ ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ವಿ.ವಿ.ಪುರ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದಾಗ ಆರೋಪಿಗಳ ಬಳಿ ವೈಟ್ ಎಂಡಿಎಂಎ, ಬ್ರೌನ್ ಎಂಡಿಎಂಎ ಹಾಗೂ 300 ಗ್ರಾಂ ಕೊಕೇನ್ ಪತ್ತೆಯಾಗಿತ್ತು. ಸಿಂಥೆಟಿಕ್ ಡ್ರಗ್ಸ್ ದುಬಾರಿ ಡ್ರಗ್ಸ್​​ಗಳಲ್ಲಿ ಪ್ರಮುಖವಾಗಿದ್ದು, ಬೆಲೆ ಏಳು ಕೋಟಿ ರೂ ಎಂದು ಅಂದಾಜಿಸಲಾಗಿತ್ತು. ಇದೇ ರೀತಿ ಜಯನಗರ ಠಾಣೆ ಪೊಲೀಸರು ಖಚಿತ ಮಾಹಿತಿ ಅಧರಿಸಿ ಮತ್ತೆ ಮೂವರನ್ನು ಬಂಧಿಸಿ 1 ಕೋಟಿ 20 ಲಕ್ಷ ರೂ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದರು.


Spread the love

About Laxminews 24x7

Check Also

ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಹಾಗೂ ಬೆಳಗಾವಿ ಜಿಲ್ಲಾ ಅಧ್ಯಕ್ಷ ಆರ್.ಕೆ.ಪಾಟೀಲ (58) ನಿಧನರಾಗಿದ್ದಾರೆ.

Spread the loveಬೆಳಗಾವಿ : ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಹಾಗೂ ಬೆಳಗಾವಿ ಜಿಲ್ಲಾ ಅಧ್ಯಕ್ಷ ಆರ್.ಕೆ.ಪಾಟೀಲ (58) ನಿಧನರಾಗಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ