Breaking News

ಮೋದಿ ಸ್ವಾಗತಕ್ಕೆ ಸಿಎಂ, ಡಿಸಿಎಂ, ರಾಜ್ಯಪಾಲರು ಯಾಕೆ ಬರಲಿಲ್ಲ?: ಕಾರಣ ತಿಳಿಸಿದ ಪ್ರಧಾನಿ

Spread the love

ಬೆಂಗಳೂರು: ರಾಜ್ಯಕ್ಕೆ ಪ್ರಧಾನಿ ಭೇಟಿ ವೇಳೆ ಶಿಷ್ಟಾಚಾರದ ಪ್ರಕಾರ ರಾಜ್ಯದ ಪ್ರಥಮ ಪ್ರಜೆಯಾದ ರಾಜ್ಯಪಾಲರು, ಮುಖ್ಯಮಂತ್ರಿಗಳು ಅಥವಾ ಹಿರಿಯ ಸಚಿವರು ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತ ಮಾಡಬೇಕು. ಆದರೆ, ಇಂದು ಹೆಚ್​ಎಎಲ್ ನಲ್ಲಿ ಅಂತಹ ಸ್ವಾಗತ ಕಾಣಲಿಲ್ಲ. ಕೇವಲ ಅಧಿಕಾರಿಗಳು ಮಾತ್ರ ಹಾಜರಿದ್ದರು. ಈ ಕುರಿತಂತೆ ಸ್ವತಃ ಪ್ರಧಾನಿ ಮೋದಿ ಸ್ಪಷ್ಟನೆ ನೀಡಿದ್ದಾರೆ.

ಪ್ರಧಾನಿ ಆಗಮನದ ಸಂದರ್ಭದಲ್ಲಿ ಕಾರ್ಯಕ್ರಮದ ವಿಷಯವಾಗಿ ಎಂದು ಪಿಎಂ ಕಚೇರಿಯಿಂದ ಮಾಹಿತಿ ಬಂದ ಕಾರಣದಿಂದಾಗಿಯೇ ರಾಜ್ಯ ಸರ್ಕಾರ ಅಧಿಕಾರಿಗಳು ಮಾತ್ರ ಭಾಗವಹಿಸಿದ್ದರು.

 

ರಾಜ್ಯ ಸರ್ಕಾರದ ಪರವಾಗಿ ಪಿಎಂ ಮೋದಿ ಆಹ್ವಾನ ಮಾಡಲು ತೆರಳುವಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಅದಕ್ಕೆ ಸಿದ್ದತೆಯೂ ಮಾಡಿಕೊಳ್ಳಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಪಿಎಂ ಕಚೇರಿಯಿಂದ ಮಾಹಿತಿಯಂತೆ ಕೇವಲ ಸರ್ಕಾರಿ ಅಧಿಕಾರಿಗಳಿಂದ ಮಾತ್ರ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಪಿಎಂ ಕಚೇರಿ ನಿರ್ದೇಶನದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಹಾಗೂ ಡಿಸಿಪಿ ದಯಾನಂದ್ ಮಾತ್ರ ಹೆಚ್​ಎಎಲ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ರಾಜ್ಯದ ಪರವಾಗಿ ಸ್ವಾಗತಿಸಿದರು.

ಸ್ಪಷ್ಟೀಕರಣ ನೀಡಿದ ಪ್ರಧಾನಿ: ಈ ವಿಚಾರವನ್ನು ಸ್ವತಃ ಮೋದಿ ಕೂಡ ಸ್ಪಷ್ಟಪಡಿಸಿದ್ದಾರೆ. ಹೆಚ್​ಎಎಲ್ ನಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡುವ ವೇಳೆ ಈ ವಿಚಾರ ಪ್ರಸ್ತಾಪ ಮಾಡಿದ ಮೋದಿ, ಆದರಣನೀಯ ಸಿಎಂ, ಡಿಸಿಎಂ, ರಾಜ್ಯಪಾಲರಲ್ಲಿ ಮನವಿ ಮಾಡಿಕೊಂಡಿದ್ದೆ. ನಾನು ಬೆಳಗ್ಗೆ ಬರುತ್ತೇನೆ, ನೀವು ಬರುವ ಕಷ್ಟ ತಗೋಬೇಡಿ ಅಂತ ಕೇಳಿಕೊಂಡಿದ್ದೆ. ನಾನು ಬಂದು ವಿಜ್ಞಾನಿಗಳಿಗೆ ಅಭಿನಂದಿಸಿ ಹೊರಟು ಹೋಗುತ್ತೇನೆ ಎಂದು ತಿಳಿಸಿ ನಾನೇ ಅವರಲ್ಲಿ ಸ್ವಾಗತಕ್ಕೆ ಬರದಂತೆ ವಿನಂತಿಸಿಕೊಂಡಿದ್ದೆ. ಅದರಂತೆ ಸಿಎಂ, ಡಿಸಿಎಂ ನಡೆಸಿಕೊಟ್ಟಿದ್ದಾರೆ. ಇದಕ್ಕಾಗಿ ಅವರಿಗೆ ನಾನು ಆಭಾರಿ ಆಗಿದ್ದೇನೆ. ಮುಂದಿನ ಬಾರಿ ನಾನು ಅಧಿಕೃತ ಕಾರ್ಯಕ್ರಮಕ್ಕೆ ಬಂದಾಗ ಪ್ರೋಟೋಕಾಲ್​ ಪಾಲಿಸಬಹುದು ಎಂದು ಪ್ರಧಾನಿ ಸ್ಪಷ್ಟೀಕರಣ ನೀಡಿದ್ದಾರೆ. ಅದೇ ರೀತಿ ರಾಜ್ಯ ಬಿಜೆಪಿಯ ಯಾವೊಬ್ಬ ನಾಯಕ ಕೂಡ ಮೋದಿ ಜೊತೆ ಕಾಣಿಸಿಕೊಳ್ಳಲಿಲ್ಲ. ಇದು ಪೂರ್ಣವಾಗಿ ಇಸ್ರೋ ವಿಜ್ಞಾನಿಗಳ ಅಭಿನಂದನೆಗೆ ಸೀಮಿತಗೊಳಿಸಿದ ಕಾರ್ಯಕ್ರಮವಾಗಿತ್ತು.

ರಸ್ತೆಯಲ್ಲೇ ನಿಂತು ಪ್ರಧಾನಿಯತ್ತ ಕೈಬೀಸಿದ ಬಿಜೆಪಿ ನಾಯಕರು: ಇಸ್ರೋ ವಿಜ್ಞಾನಿಗಳ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಬಿಜೆಪಿ ನಾಯಕರನ್ನು ಕೂಡ ಭೇಟಿಯಾಗಲಿಲ್ಲ. ಯಾರ ಭೇಟಿಗೂ ಅವಕಾಶ ನೀಡದ ಕಾರಣ ಪ್ರೋಟೋಕಾಲ್ ಪಾಲಿಸಬೇಕಾದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಸಾಮಾನ್ಯರ ಜೊತೆ ರಸ್ತೆ ಬದಿಯಲ್ಲೇ ನಿಂತು ಪ್ರಧಾನಿ ನರೇಂದ್ರ ಮೋದಿಯನ್ನು ನೋಡಿದರು. ಜಾಲಹಳ್ಳಿ ವೃತ್ತದಲ್ಲಿ ರಸ್ತೆಯ ಎರಡೂ ಬದಿಯಲ್ಲಿ ನಿಲ್ಲಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ರಸ್ತೆಯ ಒಳಗೆ ಜನರು ಪ್ರವೇಶಿಸದಂತೆ ಎರಡೂ ಕಡೆ ರಸ್ತೆಯುದ್ದಕ್ಕೂ ಬ್ಯಾರಿಕೇಡ್ ಅಳವಡಿಸಲಾಗಿತ್ತು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ