Breaking News

ಬೇಧಭಾವ ಹೊಡೆದು ಹಾಕಿ ಮುಸ್ಲಿಂ ಮಹಿಳೆಯಿಂದ ಗಣೇಶ ತಯಾರಿ

Spread the love

ಎಲ್ಲೆಡೆ ಜಾತಿ, ಧರ್ಮ ಮತ ಪಂಥ ಮೇಲು ಕೀಳು ಬಡವ ಬಲ್ಲಿದ, ಹೆಣ್ಣು ಗಂಡು ಎಂಬ ಭೇಧಭಾವದ ಕಂದಕ ಕ್ಕೆ ಸಿಲುಕಿ ನರಳಾಡುತಿದ್ದು.‌ಇಂತಹ ಸಂದರ್ಭದಲ್ಲಿ ಹಿಂದುಗಳ ಹಬ್ಬ ಅದು ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ತುಂಬವ ಜೊತೆಗೆ ಹಿಂದುಗಾಳನ್ನ ಒಡಗೂಡಿಸಿದ ಗಣೇಶ ಹಬ್ಬ ನಾಡಹಬ್ಬವಾಗಿದೆ.

ಈ ಹಬ್ಬಕ್ಕೆ ಗಣೇಶ ಮೂರ್ತಿ ಇಲ್ಲ ಎಂದರೆ ಹೇಗ ವಿಘ್ನ ನಿವಾರಕನನ್ನ
ತಯಾರು ಮಾಡಿ ಹಿಂದು ಮುಸ್ಲಿಮ್ ಬೇಧಭಾವ ಹೊಡೆದು ಹಾಕಿದ ಮುಸ್ಲಿಂ ಸಮುದಾಯದ ಮಹಿಳೆಯ ಈ ವಿಶೇಷ ವರದಿ ತಾವು ನೋಡಲೇಬೇಕು…

ಈ ಮಹಿಳೆಯನ್ನ ಒಂದು ಸಲ ನೋಡಿ. ಇವಳ ಹೆಸರು ಸುಮನ್.. ಇವಳು ಗಣೇಶ ವಿಗ್ರಹ ತಯಾರಿಸುವುದು ಇವಳ ಕಾಯಕ ಇನ್ನು ಕಳೆದ ಕೇಲ ದಿನಗಳಿಂದ ಇದೇ ಇವಳ ಆಕೆಯ ಜೀವನೋಪಾಯದ ಪ್ರಮುಖ ಮೂಲ. ಈಕೆಯ ಕಲಾತ್ಮಕ ಕೌಶಲ್ಯಕ್ಕೆ ಯಾವುದೇ ಧರ್ಮವಿಲ್ಲ.

ಹುಬ್ಬಳ್ಳಿಯ ಮೂಲದ ಮುಸ್ಲಿಂ ಮಹಿಳೆ ಕಳೆದ ನಾಲ್ಕು ವರ್ಷಗಳಿಂದ ಗಣೇಶ ಪ್ರತಿಮೆ ತಯಾರಿಸುವ ತಂಡದಲ್ಲಿ ಕೆಲಸ ಮಾಡುತ್ತಿ ದ್ದಾರೆ. ತಮ್ಮ ಕೆಲಸ ಹಾಗೂ ಇಂದಿನ ಧರ್ಮದಂಗಲ್ ಸಂದರ್ಭದಲ್ಲಿ ಇವರ ಭಕ್ತಿಗೆ ಮೆಚ್ಚಲೇ ಬೇಕು..

ಗಣೇಶ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುವಲ್ಲಿ ಪರಿಣಿತೆ, ಗಣೇಶ ವಿಗ್ರಹ ತಯಾರಕರಾದ ನಿರುಪಮಾ ಯಾದವ್ ಅವರ ಬಳಿ ಸಹಾಯಕಿಯಾಗಿ ಸುಮನ್ ಕೆಲಸ ಮಾಡುತ್ತಿದ್ದಾರೆ. ಇವರ ಜೊತೆ ಇನ್ನಿಬ್ಬರು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಅವರು ವಿಗ್ರಹಕ್ಕೆ ಆಭರಣ ವಿನ್ಯಾಸ ಮತ್ತು ಅಂತಿಮ ಟಚ್ ನೀಡುತ್ತಾರೆ.

ಹಣಕಾಸಿನ ಸಮಸ್ಯೆಯಿಂದಾಗಿ ಸುಮನ್ ತಮ್ಮ ಮನೆಯ ಬಳಿಯಿದ್ದ ವಿಗ್ರಹ ತಯಾರಿಕೆ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಪರಿಸರ ಸ್ನೇಹಿ ಗಣಪ ತಯಾರಿಕೆ ಹಾಗೂ ವಿವಿಧ ರೀತಿಯ ಗಣೇಶ ವಿಗ್ರಹಳ ತಯಾರಿಕೆ ಖುಷಿ ನೀಡುತ್ತದೆ ಎನ್ನುವ ಸುಮನ್ ಅವರ ಕೆಲಸ ಕುರಿತು ಗಣೇಶ ಮೂರ್ತಿ ತಯಾರಿಸುವ ಘಟಕದ ಮಾಲೀಕರಾದ ನಿರುಪಮಾ ಹೇಳುವುದು ಹೀಗೆ


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ