Breaking News

ಈಗ ಬಾಳೆಹಣ್ಣಿನ ಬೆಲೆ ಹೆಚ್ಚಳ ಕೆಜಿಗೆ 100 ರಿಂದ 140 ರೂ ತಲುಪಿದೆ.

Spread the love

ಬೆಂಗಳೂರು: ಟೊಮೆಟೊ, ತರಕಾರಿ ಬೆಲೆ ಏರಿಕೆ ಬಿಸಿಯಿಂದ ಹೊರಬಾರದ ಜನರಿಗೆ ಈಗ ಬಾಳೆಹಣ್ಣಿನ ಬೆಲೆ ಹೆಚ್ಚಳ ಮತ್ತೊಂದು ಆಘಾತ ಉಂಟುಮಾಡಿದೆ.

ಶ್ರಾವಣ ಮಾಸದಲ್ಲಿ ಹಬ್ಬಗಳ ಸೀಸನ್ ಆರಂಭವಾಗುತ್ತಿದ್ದಂತೆಯೇ ಬಾಳೆ ಬೆಲೆ ಸದ್ದಿಲ್ಲದೇ ಹೆಚ್ಚಾಗಿದೆ. ಬಹುಮುಖ್ಯ ಬೇಡಿಕೆಯುಳ್ಳ ಈ ಹಣ್ಣಿನ ಬೆಲೆ ಶತಕ ದಾಟಿರುವುದು ಗ್ರಾಹಕರಿಗೆ ತಲೆಬಿಸಿ ತರಿಸಿದೆ. ಬೇಡಿಕೆ ಹಾಗೂ ಪೂರೈಕೆ ವ್ಯತ್ಯಾಸದಿಂದ ಈ ವಾರ ನಗರದಲ್ಲಿ ಒಂದು ಕೆ.ಜಿ. ಏಲಕ್ಕಿ ಬಾಳೆಹಣ್ಣಿನ ದರ 100 ರಿಂದ 140 ರೂ ಆಗಿದೆ.

ಬೆಂಗಳೂರು ಎಪಿಎಂಸಿ ಘಟಕಕ್ಕೆ ತುಮಕೂರು, ರಾಮನಗರ ಚಿಕ್ಕಬಳ್ಳಾಪುರ ಹಾಗು ಬೆಂಗಳೂರು ಗ್ರಾಮಾಂತರದಿಂದ ಬಾಳೆಹಣ್ಣು ಪೂರೈಕೆಯಾಗುತ್ತದೆ. ಹಾಗೆಯೇ ತಮಿಳುನಾಡಿಗೆ ಹೊಸೂರು ಹಾಗೂ ಕೃಷ್ಣಗಿರಿಯಿಂದ ಹಣ್ಣುಗಳು ಪೂರೈಕೆಯಾಗುತ್ತವೆ. ಹೊರರಾಜ್ಯಗಳಿಂದ ಪೂರೈಕೆ ಕಡಿಮೆ ಇರುವುದರಿಂದ ಏಲಕ್ಕಿ ಬಾಳೆಯ ಸಗಟು ಮಾರಾಟ ಬೆಲೆ ಪ್ರತಿ ಕೆಜಿಗೆ 80 ರೂ ಇದ್ದರೆ ಪಚ್ಚಬಾಳೆ 20 ರೂ ಇದೆ. ಆದರೆ ಸಾಗಾಣಿಕೆ ವೆಚ್ಚವನ್ನೂ ಸೇರಿಸಿ ಚಿಲ್ಲರೆ ಮಾರಾಟ ಬೆಲೆ 100 ರಿಂದ 140 ರೂ ತಲುಪಿದೆ.


Spread the love

About Laxminews 24x7

Check Also

50:50 ಸೂತ್ರಕ್ಕೆ ಯಾರ ವಿರೋಧವು ಇಲ್ಲ ಕಾರ್ಖಾನೆ ಮಾಲೀಕರ ಬೇಡಿಕೆ ಕುರಿತು ಪ್ರತ್ಯೇಕ ಸಭೆ: ಸಿಎಂ ಸಿದ್ಧರಾಮಯ್ಯ

Spread the love 50:50 ಸೂತ್ರಕ್ಕೆ ಯಾರ ವಿರೋಧವು ಇಲ್ಲ ಕಾರ್ಖಾನೆ ಮಾಲೀಕರ ಬೇಡಿಕೆ ಕುರಿತು ಪ್ರತ್ಯೇಕ ಸಭೆ: ಸಿಎಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ