Home / ರಾಜಕೀಯ / ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ತೆರೆ; ₹4 ಕೋಟಿಗೂ ಹೆಚ್ಚು ಹಣ ಸಂಗ್ರಹ

ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ತೆರೆ; ₹4 ಕೋಟಿಗೂ ಹೆಚ್ಚು ಹಣ ಸಂಗ್ರಹ

Spread the love

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಲಾದ ಲಾಲ್‌ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಇಂದು ಅದ್ಧೂರಿ ತೆರೆಬಿದ್ದಿದ್ದು, ಕೊನೆಯ ದಿನವಾದ ಇಂದು (ಮಂಗಳವಾರ) ಪ್ರದರ್ಶನ ವೀಕ್ಷಿಸಲು ಸಸ್ಯಕಾಶಿಗೆ ಜನಸಾಗರವೇ ಹರಿದುಬಂದಿತ್ತು.

ಆಗಸ್ಟ್ 4ರಿಂದ 15ರವರೆಗೆ ಒಟ್ಟಾರೆ 5 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದು, 4 ಕೋಟಿ ರೂ.ಗೂ ಅಧಿಕ ಹಣ ಸಂಗ್ರಹವಾಗುವ ಮೂಲಕ ದಾಖಲೆ ನಿರ್ಮಾಣವಾಗಿದೆ.

 ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಸ್ವಾತಂತ್ರ್ಯೋತ್ಸವದ ದಿನವಾದ ಇಂದು ಜನಜಂಗುಳಿ ನೆರೆದಿತ್ತು. ಫ್ಲವರ್ ಶೋಗೆ 2.45 ಲಕ್ಷಕ್ಕೂ ಹೆಚ್ಚು ಜನರು ಭೇಟಿ ಕೊಟ್ಟಿದ್ದು, ಪ್ರವೇಶ ಶುಲ್ಕದಿಂದ 90 ಲಕ್ಷ ರೂಪಾಯಿಗೂ ಅಧಿಕ ಮೊತ್ತ ಸಂಗ್ರಹವಾಗಿದೆ. 12 ದಿನಗಳ ಕಾಲ ನಡೆದ ಫಲಪುಷ್ಪ ಪ್ರದರ್ಶನದಿಂದ ಒಟ್ಟು ನಾಲ್ಕು ಕೋಟಿ ರೂ.ಗೂ ಅಧಿಕ ಮೊತ್ತ ಸಂಗ್ರಹವಾಗಿದ್ದು, 8.26 ಲಕ್ಷ ಜನರು ಭೇಟಿ ನೀಡಿದ್ದಾರೆ.

 ನವಿಲಿಗೆ ಹೂಗಳಿಂದ ಸಿಂಗಾರರಜಾ ದಿನಗಳಲ್ಲಿ ಹೆಚ್ಚು ವೀಕ್ಷಕರು ಆಗಮಿಸಿದ್ದಾರೆ. ಪ್ರವೇಶ ಶುಲ್ಕ 80 ರೂ ಇದ್ದುದರಿಂದ ಈ ಬಾರಿ ಹೆಚ್ಚು ಹಣ ಸಂಗ್ರಹವಾಗಿದೆ. ವಿವಿಧ ಹೂಗಳಿಂದ ರಚಿಸಿದ ವಿಧಾನಸೌಧದ 18 ಅಡಿ ಎತ್ತರದ ಪ್ರತಿಕೃತಿ, 14 ಅಡಿಯ ಕೆಂಗಲ್ ಹನುಮಂತಯ್ಯನವರ ವಿಗ್ರಹ ಫಲಪುಷ್ಪ ಪ್ರದರ್ಶನದ ವಿಶೇಷತೆಯಾಗಿತ್ತು.

ವಿವಿಧ ಹೂವುಗಳ ಬಳಕೆ: ಪ್ರದರ್ಶನದಲ್ಲಿ ಬಗೆ ಬಗೆಯ ಗುಲಾಬಿ ಹೂಗಳು, ಜರ್ಬೇರಾ, ಆಂಥೋರಿಯಂ ಹೂಗಳು, ನಂದಿ ಗಿರಿಧಾಮದ ಇಂಪೇಷನ್ಸ್‌ ಹೂಗಳು, ಆರ್ಕಿಡ್‌, ಆಲ್​ಸ್ಟೋರೇಮೇರಿಯನ್‌ ಲಿಲ್ಲಿ, ರೆಡ್‌ಹಾಟ್‌ ಪೋಕರ್‌, ಪೂಷಿಯಾ, ಅಗಪಾಂಥಸ್‌, ಕ್ಯಾಲಾಲಿಲ್ಲಿ, ಸೈಕ್ಲೋಮನ್‌, ಸುಗಂಧರಾಜ ಸೇರಿದಂತೆ ಶೀತ ವಲಯದ ಹೂಗಳನ್ನು ಬಳಸಲಾಗಿತ್ತು.

 ಕೆಂಗಲ್​ ಹನುಮಂತಯ್ಯನವರ ವಿಗ್ರಹ2 ಕೋಟಿ ವೆಚ್ಚ: ಕೆಂಗಲ್ ಹನುಮಂತಯ್ಯನವರ ಸ್ಮರಣಾರ್ಥ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 2 ಕೋಟಿ ರೂ. ವೆಚ್ಚವಾಗಿದೆ.

ಭಾನುವಾರ 1.25 ಲಕ್ಷ ಮಂದಿ ಭೇಟಿ: ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಇಂದು ಸರ್ಕಾರಿ ರಜೆ ಇದ್ದುದರಿಂದ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಗಾಜಿನ ಮನೆಯ ಹೊರಾಂಗಣದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ, ಭದ್ರತಾ ಸಿಬ್ಬಂದಿ, ಸ್ವಯಂ ಸೇವಕರನ್ನು ನಿಯೋಜಿಸಲಾಗಿತ್ತು.

 ಬಗೆಬಗೆ ಹೂಗಳಲ್ಲಿ ಅರಳಿದ ವಿಧಾನಸೌಧಭಾನುವಾರ ಒಂದೇ ದಿನ 1.25 ಲಕ್ಷ ಮಂದಿ ಆಗಮಿಸಿದ್ದು, ಪ್ರವೇಶ ಶುಲ್ಕದ ರೂಪದಲ್ಲಿ ಒಟ್ಟಾರೆ 80.50 ಲಕ್ಷ ರೂ. ಸಂಗ್ರಹವಾಗಿದೆ. ಪ್ರವೇಶ ದ್ವಾರಗಳಲ್ಲಿ ಒಳಗೂ, ಹೊರಗೂ ಭಾರಿ ಜನಸಂದಣಿ ಕಂಡುಬಂದಿತ್ತು. ಈ ರಸ್ತೆಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್‌ಗಳು, ಮೆಟ್ರೋ ರೈಲುಗಳಲ್ಲೂ ಪ್ರಯಾಣಿಕರ ಸಂಖ್ಯೆಯೂ ದುಪ್ಪಟ್ಟಾಗಿತ್ತು.


Spread the love

About Laxminews 24x7

Check Also

ಅಧಿಕಾರಿಗಳ ಭರವಸೆ: ಧರಣಿ ಅಂತ್ಯ.

Spread the love ರಾಮದುರ್ಗ: ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಹಣವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಸರ್ಕಾರಕ್ಕೆ ಭರಿಸುವ ಭರವಸೆಯನ್ನು ತಾಲ್ಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ