ವಿಜಯಪುರ… ವಿಜಯಪುರ ಜಿಲ್ಲೆಯಲ್ಲಿ ಮೊಹರಂ ಸಂಭ್ರಮ ಕಳೆಗಟ್ಟಿದೆ. ಮೊಹರಂ ನಿಮಿತ್ಯ ಹಾಕಿದ ಕೆಂಡದಲ್ಲಿ ವ್ಯಕ್ತಿಯೊರ್ವ
ಕಂಬಳಿ ಹಾಸಿ ಕುಳಿತ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಅಮರಗೋಳ ಗ್ರಾಮದಲ್ಲಿ ನಡೆದಿದೆ. ಇಂದು ನಸುಕಿನ ಜನ ಜಾವ ಗ್ರಾಮದ ಅಲಾಯಿ ದೇವರ ಎದುರುಗೆ ಹಾಕಿದ ನಿಗಿನಿಗಿ ಕೆಂಡದ ಮೇಲೆ ಯಲ್ಲಾಲಿಂಗ ಹಿರೇಹಾಳ
ಎನ್ನುವವರು ನೀಗಿ ನೀಗಿ ಕೆಂಡದ ಮೇಲೆ ಕೆಲ ಕ್ಷಣ ಕಂಬಳಿ ಹಾಸಿ ಭಕ್ತಿ ಸಮರ್ಪನೆ ಮಾಡಿದರು. ಬಳಿಕ ಬರಿಗೈಯ್ಯಲ್ಲಿ ಕೆಂಡ ತುಂಬಿ ಕೆಂಡದಾರತಿ ಮಾಡಿದ ಯಲ್ಲಾಲಿಂಗನ ಭಕ್ತಿ ಪಾರಾಕಾಷ್ಟೆಗೆ ಗ್ರಾಮದ ಜನರು ಆಶ್ಚರ್ಯ ವ್ಯಕ್ತಪಡಿಸಿದರು.
ಬೆಂಕಿ ಮೇಲೆ ಕುಳಿತರೂ ಕೈಯ್ಯಿಂದ ಬೆಂಕಿ ತುಂಬಿದರೂ ಯಲ್ಲಾಲಿಂಗನಿಗೆ ಯಾವುದೇ ಸುಟ್ಟ ಗಾಯವಾಗಿಲ್ಲಾ, ಇದು ಅಲಾಯಿ ದೇವರ ಪವಾಡವೆಂದು ಜನರ ನಂಬಿದ್ದಾರೆ.
Laxmi News 24×7