Breaking News
Home / ರಾಜಕೀಯ / 2022-23 ಹಣಕಾಸು ವರ್ಷಕ್ಕೆ EPF ನ ಬಡ್ಡಿ ದರವನ್ನು 8.15 ಪ್ರತಿಶತಕ್ಕೆ ನಿಗದಿಪಡಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ ಶೇ.0.05ರಷ್ಟು ಹೆಚ್ಚಾಗಿದೆ.

2022-23 ಹಣಕಾಸು ವರ್ಷಕ್ಕೆ EPF ನ ಬಡ್ಡಿ ದರವನ್ನು 8.15 ಪ್ರತಿಶತಕ್ಕೆ ನಿಗದಿಪಡಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ ಶೇ.0.05ರಷ್ಟು ಹೆಚ್ಚಾಗಿದೆ.

Spread the love

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗಳಲ್ಲಿನ ಹಣದ ಮೇಲಿನ ಬಡ್ಡಿ ದರವನ್ನು (EPFO Interest rate) ಅಂತಿಮಗೊಳಿಸಲಾಗಿದೆ.

2022-23ನೇ ಹಣಕಾಸು ವರ್ಷಕ್ಕೆ ಶೇ 8.15 ಬಡ್ಡಿ ನೀಡಲು ಕೇಂದ್ರೀಯ ಟ್ರಸ್ಟಿಗಳ ಮಂಡಳಿ (ಸಿಬಿಟಿ) ತೆಗೆದುಕೊಂಡ ನಿರ್ಧಾರವನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಈ ಸಂಬಂಧ ಇಪಿಎಫ್‌ಒ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ.

ಈ ವರ್ಷದ ಮಾರ್ಚ್‌ನಲ್ಲಿ ಇಪಿಎಫ್ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (ಸಿಬಿಟಿ) 2022-23ರ ಹಣಕಾಸು ವರ್ಷಕ್ಕೆ ಶೇ 8.15 ಬಡ್ಡಿಯನ್ನು (ಇಪಿಎಫ್‌ಒ ಬಡ್ಡಿ ದರ) ನೀಡಲು ನಿರ್ಧರಿಸಿದೆ. 2021-22ರಲ್ಲಿ ನೀಡಲಾದ ಶೇ 8.10 ಕ್ಕೆ ಹೋಲಿಸಿದರೆ ಇದು 0.05% ಹೆಚ್ಚಾಗಿದೆ. ಸಿಬಿಟಿ ಈ ನಿರ್ಧಾರವನ್ನು ಕೇಂದ್ರ ಹಣಕಾಸು ಇಲಾಖೆಗೆ ಕಳುಹಿಸಿತ್ತು. ಇತ್ತೀಚೆಗಷ್ಟೇ ಇಪಿಎಫ್‌ಒ ಬಡ್ಡಿದರದ ಕುರಿತು ಹಣಕಾಸು ಇಲಾಖೆಯು ಅನುಮತಿ ನೀಡಿದ ಬಳಿಕ ಘೋಷಣೆ ಮಾಡಿದೆ. ಕೇಂದ್ರದ ಅನುಮೋದನೆಯೊಂದಿಗೆ, ಇಪಿಎಫ್‌ಒ ಕ್ಷೇತ್ರ ಅಧಿಕಾರಿಗಳು ಶೀಘ್ರದಲ್ಲೇ ಈ ಮೊತ್ತದ ಬಡ್ಡಿಯನ್ನು 6 ಕೋಟಿ ಚಂದಾದಾರರ ಖಾತೆಗಳಿಗೆ ಜಮಾ ಮಾಡಲಿದ್ದಾರೆ.

40 ವರ್ಷಗಳಲ್ಲೇ ಅತ್ಯಂತ ಕಡಿಮೆ ಬಡ್ಡಿ ದರ: ಗಮನಾರ್ಹವಾಗಿ, 2021-22 ರ ಹಣಕಾಸು ವರ್ಷಕ್ಕೆ, ಇಪಿಎಫ್‌ಒ ಇಪಿಎಫ್ ಖಾತೆಗೆ ಬಡ್ಡಿ ದರವನ್ನು ಶೇಕಡಾ 8.10 ಕ್ಕೆ ನಿಗದಿಪಡಿಸಿದೆ. ಇದು ಸುಮಾರು 40 ವರ್ಷಗಳಲ್ಲೇ ಅತ್ಯಂತ ಕಡಿಮೆ ಬಡ್ಡಿ ದರವಾಗಿದೆ. 2020-21 ರ ಇಪಿಎಫ್​ ಠೇವಣಿಗಳ ಮೇಲಿನ 8.5 ಶೇಕಡಾ ಬಡ್ಡಿ ದರವನ್ನು ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿ (CBT) ಮಾರ್ಚ್ 2021 ರಲ್ಲಿ ನಿರ್ಧರಿಸಿತ್ತು. ಅಕ್ಟೋಬರ್ 2021 ರಲ್ಲಿ ಹಣಕಾಸು ಸಚಿವಾಲಯವು ಅನುಮೋದಿಸಿತ್ತು. ನಂತರ ಇಪಿಎಫ್​ಓ ​​ಕ್ಷೇತ್ರ ಕಚೇರಿಗಳಿಗೆ ಕ್ರೆಡಿಟ್ ಮಾಡಲು ನಿರ್ದೇಶನಗಳನ್ನು ನೀಡಿತ್ತು. 2018-19 ರಲ್ಲಿ ನೀಡಲಾಗುತ್ತಿದ್ದ ಶೇಕಡಾ 8.65 ಬಡ್ಡಿದರವನ್ನು 2019-20ರಲ್ಲಿ 8.5 ಕ್ಕೆ ಇಳಿಸಿದೆ. ಇನ್ನು ಈ ಹಿಂದೆ ಹೋದರೆ 2016-17ರಲ್ಲಿ ಶೇ 8.65 ಮತ್ತು 2017-18ರಲ್ಲಿ ಶೇ 8.55 ಬಡ್ಡಿ ದರವನ್ನು ಒದಗಿಸಿದೆ. 2015-16ರಲ್ಲಿ ಬಡ್ಡಿ ದರವು 8.8 ಇತ್ತು. ಹಾಗೆ 2013-14 ಮತ್ತು 2014-15 ರಲ್ಲಿ 8.75 ಪರ್ಸೆಂಟ್ ಬಡ್ಡಿದರವನ್ನು ನೀಡಲಾಗುತ್ತಿತ್ತು. 2012-13 ರಲ್ಲಿ 8.5 ಬಡ್ಡಿ ಮತ್ತು 2011-12ರಲ್ಲಿ ಶೇ.8.25 ಬಡ್ಡಿಯನ್ನು ಉದ್ಯೋಗಿಗಳಿಗೆ ನೀಡಲಾಗಿದೆ.


Spread the love

About Laxminews 24x7

Check Also

ಬೈಲಹೊಂಗಲದಲ್ಲಿ ಇದ್ದಾರೆ ‘ಹತ್ತು ರೂಪಾಯಿ’ ಡಾಕ್ಟ್ರು

Spread the love ಬೈಲಹೊಂಗಲ: ಇದು ದುಬಾರಿ ಯುಗ. ಇಂದು ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಶುಲ್ಕ ಜನರ ಕೈಸುಡುತ್ತಿದೆ. ಆದರೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ