Breaking News

ಮುಂಗಾರು ಮಳೆ ವಿಳಂಬವಾಗಿದ್ದರಿಂದ ಎಲೆಕೋಸು ಇಳುವರಿ ಕುಂಠಿತವಾಗಿದ್ದು, ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೇ ರೈತರ ನಷ್ಟ

Spread the love

ಹಾವೇರಿ: ಜಿಲ್ಲೆಯ ರೈತರು ಅತ್ಯುತ್ತಮವಾದ ಎಲೆಕೋಸು ಬೆಳೆಯುತ್ತಾರೆ.

ಇಲ್ಲಿ ಬೆಳೆಯುವ ಎಲೆಕೋಸಿಗೆ ಮಧ್ಯಪ್ರದೇಶ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೆಚ್ಚು ಬೇಡಿಕೆ ಇದ್ದು, ಜಿಲ್ಲೆಯಿಂದ ದೊಡ್ಡ ಪ್ರಮಾಣದಲ್ಲಿ ಎಲೆಕೋಸು ರಫ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನೂರಾರು ರೈತರು ಕೆಲ ವರ್ಷಗಳಿಂದ ಎಲೆಕೋಸು ಬೆಳೆಯುತ್ತಿದ್ದಾರೆ. ಆದರೆ, ಪ್ರತಿವರ್ಷ ಉತ್ತಮ ಆದಾಯಗಳಿಸುತ್ತಿದ್ದ ಎಲೆಕೋಸು ಬೆಳೆಗಾರರು ಈ ವರ್ಷ ನಷ್ಟದ ಹಾದಿಯಲ್ಲಿದ್ದಾರೆ.

ಈ ಬಾರಿ ಮುಂಗಾರು ಮಳೆ ವಿಳಂಬದಿಂದ ಎಲೆಕೋಸು ಫಸಲು ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲಾ. ಮುಂಗಾರು ಮಳೆ ವಿಳಂಬ ಎಲೆಕೋಸು ಬೆಳೆಗಾರರಿಗೆ ಹಲವು ಸಮಸ್ಯೆಗಳನ್ನು ಉಂಟುಮಾಡಿದೆ. ಬೇಸಿಗೆ ಕಾಲದಲ್ಲಿ ನಾಟಿ ಮಾಡಿದ್ದ ಎಲೆಕೋಸು ಬೆಳೆ ಮುಂಗಾರು ಮಳೆಗೆ ಉತ್ತಮವಾಗಿ ಬರುತ್ತಿತ್ತು. ಆದರೆ ಈ ಬಾರಿ ಮುಂಗಾರು ಮಳೆ ವಿಳಂಬವಾಗಿರುವುದರಿಂದ ಇಳುವರಿಯಲ್ಲಿ ಕುಂಠಿತವಾಗಿದೆ. ಪ್ರತಿವರ್ಷ ಎಕರೆಗೆ 25 ರಿಂದ 30 ಟನ್ ಬರುತ್ತಿದ್ದ ಎಸೆಕೋಸು ಈ ವರ್ಷ ಎಕರೆಗೆ 15 ರಿಂದ 20 ಟನ್ ಬಂದಿದೆ.

ಎಸೆಕೋಸು ಗಡ್ಡೆಗಳ ಗಾತ್ರ ಸಹ ಸಣ್ಣದಾಗಿದ್ದು, ವ್ಯಾಪಾರಿಗಳು ಈ ರೀತಿಯ ಎಲೆಕೋಸು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಬಾಯಿಗೆ ಬಂದ ದರದಲ್ಲಿ ಬೆಲೆ ನಿಗಧಿ ಮಾಡುತ್ತಿದ್ದಾರೆ. ಕಳೆದ ವರ್ಷ 8ರಿಂದ 10 ರೂಪಾಯಿಗೆ ಕೆಜಿ ಖರೀದಿಸುತ್ತಿದ್ದ ವರ್ತಕರು ಈ ವರ್ಷ 3 ರೂಪಾಯಿ ನಾಲ್ಕು ರೂಪಾಯಿಗೆ ಕೆಜಿಯಂತೆ ಖರೀದಿಸುತ್ತಿದ್ದಾರೆ. ಕಡಿಮೆ ಗಾತ್ರದ ಎಲೆಕೋಸನ್ನು ಕೆಜಿಗೆ ಒಂದು ರೂಪಾಯಿಯಂತೆ ಖರೀದಿ ಮಾಡುತ್ತಿದ್ದಾರೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ