ಬೆಳಗಾವಿಯ ವಾರ್ಡ್ ನಂ.29ರಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು ನೂತನ ಕಸದ ವಾಹನಕ್ಕೆ ಚಾಲನೆ ನೀಡಲಾಯಿತು.
ವಾರ್ಡ್ ನಂ.29ರಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು ಕಸದ ಗಾಡಿಗಳು ಕಡಿಮೆ ಇದ್ದವು. ಮನೆಯ ತ್ಯಾಜ್ಯವನ್ನು ವಾರಕ್ಕೆ 3 ಬಾರಿ ಮಾತ್ರ ಸಂಗ್ರಹಿಸಲಾಗುತ್ತದೆ. ಇದನ್ನು ಗಮನಿಸಿದ ಕಾರ್ಪೊರೇಟರ್ ನಿತಿನ್ ಜಾಧವ್ ಅವರು ಅಭಯ ಪಾಟೀಲ ಅವರೊಂದಿಗೆ ಚರ್ಚಿಸಿ ನೂತನ ಕಸದ ವಾಹನಕ್ಕೆ ಅನುಮೋದನೆ ಪಡೆದು. ಸೋಮವಾರ ಕಸದ ವಾಹನ ಪೂಜೆ ಸಲ್ಲಿಸಿ ಕಸ ಸಂಗ್ರಹಿಸಲಾಯಿತು.
ಈ ಕುರಿತು ಮಾಹಿತಿ ನೀಡಿದ ಕಾರ್ಪೊರೇಟರ್ ನಿತಿನ್ ಜಾಧವ್.
ಈಗ ಶೀಘ್ರದಲ್ಲಿಯೇ ಪ್ರತಿದಿನ ಕಸ ಸಾಗಿಸುವ ವ್ಯವಸ್ಥೆ ಮಾಡಲಾಗುವುದು. ಈ ಸಂದರ್ಭದಲ್ಲಿ ಬಾಳು ಹಂಗೀರಗೇಕರ, ನಾಯ್ಕ, ಚಂದ್ರಕುಮಾರ ಕಾಂಬಳೆ, ಅರುಣ ಪತ್ತಾರ, ಕಿಸಾನ್ ಬಿರ್ಜೆ, ಸೂರಜ್ ಗವಿ, ಸಂದೀಪ ಕೋಕಿತಕರ, ನಂದನ ಕುಲಕರ್ಣಿ ಸೇರಿದಂತೆ ನಾಗರಿಕರು ಉಪಸ್ಥಿತರಿದ್ದರು.