ಸಂಸದ ಪ್ರತಾಪ್ ಸಿಂಹಗೆ ನಿಂದಿಸಿದ ಪ್ರಕರಣ ; ಪೊಲೀಸ್ ಪೇದೆ ಸಸ್ಪೆಂಡ್ ಮಾಡಿ ಕಮಿಷನರ್ ಆದೇಶ..!
ಸಾಮಾಜಿಕ ಜಾಲತಾಣದಲ್ಲಿ ಸಂಸದ ಪ್ರತಾಪಸಿಂಹ ಅವರನ್ನು ನಿಂದನೆ ಮಾಡಿದ್ದ ಪೊಲೀಸ್ ಪೇದೆಯನ್ನು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.
ಮೈಸೂರಿನ ವಿವಿ ಪುರಂ ಸಂಚಾರ ವಿಭಾಗದಲ್ಲಿ ಪೇದೆಯಾಗಿರುವ ಬಿ. ಪ್ರಕಾಶ್ ಫೇಸ್ ಬುಕ್ ನಲ್ಲಿ ಸಂಸದ ಪ್ರತಾಪಸಿಂಹ ವಿರುದ್ದ ಕಾಮೆಂಟ್ಸ್ ಮಾಡಿ ನಿಂದಿಸಿದ್ಷರು. ಇದರ ವಿರುದ್ದ ಸಂಸದ ಪ್ರತಾಪಸಿಂಹ ನಗರ ಪೊಲೀಸ್ ಆಯುಕ್ತರಿಗೆ ಲಿಖಿತವಾಗಿ ದೂರು ನೀಡಿದ್ದರು. ದೂರನ್ನು ಪರಿಶೀಲಿಸಿದ ನಗರ ಪೊಲೀಸ್ ಆಯುಕ್ತರು ಸಂಚಾರ ಪೇದೆ ಪ್ರಕಾಶ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.