Breaking News

ತೋಟಗಾರಿಕೆ ವಿವಿ 12ನೇ ಘಟಿಕೋತ್ಸವ:16 ಚಿನ್ನ ಮುಡಿಗೇರಿಸಿಕೊಂಡ ಗ್ರಾಮೀಣ ಪ್ರತಿಭೆ

Spread the love

ಬಾಗಲಕೋಟೆ: ತೋಟಗಾರಿಕೆ ವಿವಿಯಲ್ಲಿ ಶನಿವಾರ ನಡೆದ 12ನೇ ಘಟಿಕೋತ್ಸವದಲ್ಲಿ ಕಿರಾಣಿ ವ್ಯಾಪಾರಸ್ಥನ ಮಗಳು ಧರಣಿಗೆ 16 ಚಿನ್ನದ ಪದಕಗಳು ಲಭಿಸಿವೆ. ರಾಜ್ಯದ ರಾಜ್ಯಪಾಲರು ಹಾಗೂ ತೋಟಗಾರಿಕಾ ವಿವಿಯ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಚಿನ್ನದ ಪದಕ ಸ್ವೀಕರಿಸಿದರು.

ಕೋಲಾರ ಜಿಲ್ಲೆಯ ಸುಗಟೂರ ಗ್ರಾಮದ ಧರಣಿ ಶೆಟ್ಟಿ ಅವರು, ಕಿರಾಣಿ ವ್ಯಾಪಾರಸ್ಥ ನಾಗೇಂದ್ರ ಮತ್ತು ಸವಿತಾ ದಂಪತಿಯ ಮೊದಲ ಮಗಳು. ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ 10ನೇ ತರಗತಿಯ ವರೆಗೆ, ಸಹ್ಯಾದ್ರಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿರುವರು. ಮುನಿರಾಬಾದ್ ತೋಟಗಾರಿಕೆ ವಿಶ್ವವಿದ್ಯಾಲಯದ ಬಿಎಸ್‍ಸಿ (ಹಾನರ್ಸ್) ಪದವಿಯಲ್ಲಿ ವಿವಿಧ ವಿಷಯಗಳಲ್ಲಿ ಒಟ್ಟು 16 ಚಿನ್ನದ ಪದಕಗಳನ್ನು ಧರಣಿ ಗಳಿಸಿದ್ದಾರೆ.

ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ 2019ರಲ್ಲಿ ನಡೆದ ಅಂತರ್ ವಿದ್ಯಾಲಯಗಳ ಪ್ರಬಂಧ ಸ್ಪರ್ಧೆ, 2021 ರಲ್ಲಿ ಮೈಸೂರಿನಲ್ಲಿ ನಡೆದ ಅಂತರ್ ವಿದ್ಯಾಲಯಗಳ ಯುವ ಪ್ರತಿಭೋತ್ಸವದಲ್ಲಿ ಕೊಲಾಜ್ಮೇಕಿಂಗ್‍ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಚಿತ್ರಕಲೆ, ಕೋಲಾಜ್, ಅಡುಗೆಯಲ್ಲಿ ಹೊಸ ಪ್ರಯೋಗ ಮಾಡುವ ಹವ್ಯಾಸ ರೂಢಿಸಿಕೊಂಡಿದ್ದು,ಸದ್ಯ ಪದವಿಯಲ್ಲಿ 16 ಚಿನ್ನದ ಪದಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ. ಮುಂದೆ ಯುಪಿಎಸ್‍ಸಿ ನಾಗರಿಕಾ ಸೇವಾ ಪರೀಕ್ಷೆ ಬರೆಯುವ ಬಗ್ಗೆ ಹೆಚ್ಚಿನ ಒಲವು ಇದೆ ಎಂದು ಈಟಿವಿ ಭಾರತ್​ದೊಂದಿಗೆ ಧರಣಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳು… ಬಿಎಸ್ಸಿ (ಹಾನರ್ಸ್) ಪದವಿಯಲ್ಲಿ ನಿಶ್ಚಿತ ಎನ್ 4 ಬಂಗಾರದ ಪದಕ ಪಡೆದರೆ, ಸಚೀತನ ಮೋಡಗಿ, ಸರಸ್ವತಿ ಆರ್, ಪ್ರಿಯಾಂಕಾ ಎಚ್.ಎಲ್ ತಲಾ 3 ಬಂಗಾರದ ಪದಕ ಗಳಿಸಿದ್ದಾರೆ. ಎಸ್.ಪಿ.ಶೃತಿ, ಕುನೆ ಲಾವಣ್ಯ, ಎಚ್.ಎಸ್.ಹೇಮಂತ ಗೌಡ, ಭುವನೇಶ್ವರಿ ಖಡಕಿ ತಲಾ 2 ಬಂಗಾರದ ಪದಕ ಪಡೆದಿದ್ದಾರೆ.

ಕಾವ್ಯಶ್ರೀ ಡಿ.ಸಿ, ವರ್ಷ ಮೋಜಿ, ದಿವ್ಯಭಾರತಿ, ಸುಷ್ಮಾ ಎನ್, ಶೀತಲ್ ಬಿ.ಆರ್, ಮಂಜುನಾಥ ಮೆಂದೋಳೆ, ಲಾವಣ್ಯ ವಾಯ್.ಎಸ್, ಅಮಲ್ ಕಿಸೋರ ತಲಾ ಒಂದು ಬಂಗಾರದ ಪದಕ ಸ್ವೀಕರಿಸಿದ್ದಾರೆ.

ಪಿಎಚ್.ಡಿ ಪದವಿಯಲ್ಲಿ ಜಮುನಾರಾಣಿ ಜಿ.ಎನ್ ಪ್ರಥಮ ರ‍್ಯಾಂಕ್​ನೊಂದಿಗೆ 2 ಚಿನ್ನದ ಪದಕ ಪಡೆದರು. ದ್ವಿತೀಯ ರ‍್ಯಾಂಕ್​ನೊಂದಿಗೆ ರುಚಿತಾ ಟಿ 3 ಬಂಗಾರದ ಪದಕ ಸ್ವೀಕರಿಸಿದರು. ಎಂ.ಎಸ್.ಸಿ (ತೋಟಗಾರಿಕೆಯಲ್ಲಿ) ಅನುಷ್ಕಾ 6 ಚಿನ್ನದ ಪದಕ ಪಡೆದುಕೊಂಡರೆ, ಅಜಿತ್ ಕುಮಾರ 3 ಚಿನ್ನದ ಪದಕ, ಸ್ನೇಹಾ ಹೆಂಬಾಡೆ, ವಿದ್ಯಾ ತಲಾ ಎರಡು ಚಿನ್ನದ ಪದಕ, ಸಹನಾ ಜಿ.ಎಸ್, ಧನುಜಾ ಜಿ.ಎಸ್, ದಿವಾಕರ ಸಿ.ಜಿ, ಶಾಂತಾ ತಲಾ ಒಂದು ಚಿನ್ನದ ಪದಕಗಳನ್ನು ಪಡೆದುಕೊಂಡರು.

ಕೃಷಿ ,ತೋಟಗಾರಿಕೆ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ದಿಗೆ ಶ್ರಮಿಸಿ: ಥಾವರ್ ಚಂದ್ ಗೆಹ್ಲೋಟ್: ಯುವ ಪದವೀಧರರು ಹೊಸ ಆಲೋಚನೆ,ಸೇವಾ ಮನೋಭಾವನೆಯೊಂದಿಗೆ ರಾಜ್ಯ ಮತ್ತು ದೇಶದ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಸುಸ್ಥಿರವಾದ ಅಭಿವೃದ್ದಿಯ ಕೊಡುಗೆ ನೀಡಬೇಕು ಎಂದು ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ