Breaking News

670 ಸಹಾಯಕ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

Spread the love

ರ್ಕಾರಿ ಹುದ್ದೆಗಳ ನಿರೀಕ್ಷೆಯಲ್ಲಿದ್ದವರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಹಿ ಸುದ್ದಿ ನೀಡಿದೆ. ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

ಕರ್ನಾಟಕ ಸರ್ಕಾರದ ಹುದ್ದೆಗಳಿಗೆ ತಯಾರಿ ನಡೆಸುತ್ತಾ ಎದುರು ನೋಡುತ್ತಿದ್ದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶುಭ ಸುದ್ದಿ ನೀಡಿದೆ.

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 607 ಜ್ಯೂನಿಯರ್​ ಅಸಿಸ್ಟಂಟ್​, ಎಸ್​ಡಿಎ ಮತ್ತು ಅಸಿಸ್ಟೆಂಟ್​ ಹುದ್ದೆ ಭರ್ತಿಗೆ ಕೆಇಎ ಹೊಸ ಅಧಿಸೂಚನೆ ಪ್ರಕಟಿಸಿದೆ.

 ಅಧಿಸೂಚನೆಕರ್ನಾಟಕ ರಾಜ್ಯದ ಸರ್ಕಾರಿ ಸಂಸ್ಥೆಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹಲವು ಸ್ತರದ ಹುದ್ದೆಗಳ ಭರ್ತಿಗೆ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಯಮ ನಿಯಮಿತ, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ಮತ್ತು ಮೈಸೂರು ಸೇಲ್ಸ್​ ಇಂಟರ್​ ನ್ಯಾಷನಲ್​ ಲಿಮಿಟೆಡ್​​ನಲ್ಲಿ ಖಾಲಿ ಇರುವ ಒಟ್ಟು 607 ಹುದ್ದೆಗಳ ಭರ್ತಿ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.

 ಅಧಿಸೂಚನೆಹುದ್ದೆ ವಿವರ:

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ

  • ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ) ಗ್ರೂಪ್​-ಬಿ) : 4
  • ಸಹಾಯಕ ವ್ಯವಸ್ಥಾಪಕರು (ತಾಂತ್ರಿಕೇತರ)- ಗ್ರೂಪ್​ ಬಿ: 2
  • ಆಪ್ತ ಕಾರ್ಯದರ್ಶಿ- ಗ್ರೂಪ್​ ಸಿ : 1
  • ಹಿರಿಯ ಸಹಾಯಕರು (ತಾಂತ್ರಿಕೇತರ) ಗ್ರೂಪ್​ ಸಿ : 3
  • ಸಹಾಯಕರು (ತಾಂತ್ರಿಕ) ಗ್ರೂಪ್​ ಸಿ : 6
  • ಸಹಾಯಕರು (ತಾಂತ್ರಿಕೇತರ) ಗ್ರೂಪ್​ ಸಿ : 6
  • ಒಟ್ಟು ಹುದ್ದೆ: 26

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ

  • ಸಹಾಯಕ ವ್ಯವಸ್ಥಾಪಕರು : 10
  • ಗುಣಮಟ್ಟ ನಿರೀಕ್ಷಕರು : 23
  • ಹಿರಿಯ ಸಹಾಯಕರು (ಲೆಕ್ಕ): 33
  • ಹಿರಿಯ ಸಹಾಯಕರು: 57
  • ಕಿರಿಯ ಸಹಾಯಕರು: 263
  • ಒಟ್ಟು ಹುದ್ದೆಗಳು : 386

ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ

  • ಕಲ್ಯಾಣ ಅಧಿಕಾರಿ (ಗ್ರೂಪ್​ ಸಿ) : 12
  • ಕ್ಷೇತ್ರ ನಿರೀಕ್ಷಕರು (ಗ್ರೂಪ್​ ಸಿ) : 60
  • ಪ್ರಥಮ ದರ್ಜೆ ಸಹಾಯಕರು (ಗ್ರೂಪ್​ ಸಿ) : 12
  • ಆಪ್ತ ಸಹಾಯಕರು (ಗ್ರೂಪ್​ ಸಿ) : 02
  • ದ್ವಿತೀಯ ದರ್ಜೆ ಸಹಾಯಕರು (ಗ್ರೂಪ್​ ಸಿ) : 100.
  • ಒಟ್ಟು : 186

ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್ ಲಿಮಿಟೆಡ್

  • ಸಹಾಯಕ ವ್ಯವಸ್ಥಾಪಕರು (ಸೇಲ್ಸ್​) : 14
  • ಸಹಾಯಕ ವ್ಯವಸ್ಥಾಪಕರು (ಅಕೌಂಟ್ಸ್​): 4
  • ಸಹಾಯಕ ವ್ಯವಸ್ಥಾಪಕರು (ಪರ್ಸನಲ್​) 1
  • ಸಹಾಯಕ ವ್ಯವಸ್ಥಾಪಕರು (ಫಾರ್ಮ) 1
  • ಸಹಾಯಕ ವ್ಯವಸ್ಥಾಪಕರು (ಟೂರ್ಸ್​ ಅಂಡ್​ ಟ್ರಾವಲ್ಸ್​): 1
  • ಸಹಾಯಕ ವ್ಯವಸ್ಥಾಪಕರು (ಇಡಿಪಿ): 2
  • ಸೇಲ್ಸ್​​ ಮೇಲ್ವಿಚಾರಕರು : 23
  • ಮಾರಾಟ ಪ್ರತಿನಿಧಿ : 6
  • ಸೇಲ್ಸ್‌ ಇಂಜಿನಿಯರ್ (ಮೆಕ್ಯಾನಿಕಲ್​) : 1
  • ಸೇಲ್ಸ್​ ಇಂಜಿನಿಯರ್​ (ಎಲೆಕ್ಟ್ರಿಕಲ್​): 1
  • ಸೇಲ್ಸ್​ ಇಂಜಿನಿಯರ್​ (ಸಿವಿಲ್​​): 1
  • ಸೇಲ್ಸ್​ ಇಂಜಿನಿಯರ್​ (ಇ ಅಂಡ್​ ಸಿ​): 1
  • ಲೆಕ್ಕಗುಮಾಸ್ತರು : 06
  • ಗುಮಾಸ್ತರು : 14
  • ಒಟ್ಟು 72

ವಿದ್ಯಾರ್ಹತೆ- ವೇತನ: ಹುದ್ದೆಗೆ ಅನುಸಾರವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಅಭ್ಯರ್ಥಿಗಳು ಪದವಿ ಹೊಂದಿರಬೇಕು. ವಿವಿಧ ಶ್ರೇಣಿಗಳ ಹುದ್ದೆಗಳಿಗೆ ಅನುಸಾರವಾಗಿ 11,600 ರೂ.ಯಿಂದ 97,100 ರೂವರೆಗೆ ವೇತನ ನಿಗದಿಸಲಾಗಿದೆ.

ಆಯ್ಕೆ ವಿಧಾನ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ವಯೋಮಿತಿ, ಶೈಕ್ಷಣಿಕ ವಿದ್ಯಾರ್ಹತೆ, ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಸಲಾಗುವುದು.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಕೆಇಎ ಅಧಿಕೃತ ಜಾಲತಾಣದಲ್ಲಿ ನಿಗದಿತ ಲಿಕ್​ ಅಲ್ಲಿ ಅಗತ್ಯ ಮಾಹಿತಿ ಮತ್ತು ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ ದಿನಾಂಕ

  • ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಆರಂಭ: ಜೂನ್​ 23 ರಿಂದ ಮಧ್ಯಾಹ್ನ 2ಗಂಟೆಯಿಂದ
  • ಆನ್​ಲೈನ್​ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ: ಜುಲೈ 22 ಸಂಜೆ 5.30
  • ಶುಲ್ಕ ಪಾವತಿಗೆ ಕಡೆಯ ದಿನ ಜುಲೈ 25

ಈ ಹುದ್ದೆ ಕುರಿತ ಅಧಿಕೃತ ಅಧಿಸೂಚನೆ ಮತ್ತು ವಿವರವಾದ ಮಾಹಿತಿ ಪಡೆಯಲು ಅಭ್ಯರ್ಥಿಗಳು kea.kar.nic.in ಜಾಲತಾಣಕ್ಕೆ ಭೇಟಿ ನೀಡಬಹುದು


Spread the love

About Laxminews 24x7

Check Also

ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ ಪೇದೆ ಅಮಾನತು

Spread the love ಬೀದರ್ : ಡ್ಯೂಟಿಗೆ ತಡವಾಗಿ ಬಂದಿರುವುದನ್ನು ಪ್ರಶ್ನಿಸಿದ್ದ ಮಹಿಳಾ ಪಿಎಸ್‌ಐ ಮೇಲೆ ಪೊಲಿಸ್ ಪೇದೆಯೊಬ್ಬ ಹಲ್ಲೆ ಮಾಡಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ