Breaking News

ಶಾಲಾ ಕಟ್ಟಡಗಳು ಅತ್ಯಂತ ಸುಸಜ್ಜಿತವಾಗಿ ನಿರ್ಮಾಣವಾಗಬೇಕು. ಕಳಪೆ ಕಾಮಗಾರಿ ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ:ಲಕ್ಷ್ಮಿ ಹೆಬ್ಬಾಳಕರ್

Spread the love

ಬೆಳಗಾವಿ – ಶಾಲೆಗಳು ಮಕ್ಕಳ ಭವಿಷ್ಯ ರೂಪಿಸುವ ತಾಣ. ಅಲ್ಲಿ ನಿರಾತಂಕವಾಗಿ ಮತ್ತು ನಿಷ್ಠೆ, ಭಕ್ತಿಯಿಂದ ಮಕ್ಕಳು ಕಲಿಯುವಂತಹ ವಾತಾವರಣವಿರಬೇಕು. ಶಾಲಾ ಕಟ್ಟಡಗಳು ಅತ್ಯಂತ ಸುಸಜ್ಜಿತವಾಗಿ ನಿರ್ಮಾಣವಾಗಬೇಕು. ಕಳಪೆ ಕಾಮಗಾರಿ ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ವಾಘವಾಡೆ ಗ್ರಾಮದ ಸರ್ಕಾರಿ ಮರಾಠಿ​ ಹಿರಿಯ​ ಪ್ರಾಥಮಿಕ ಶಾಲೆಯ ಎರಡು ನೂತನ ಕೊಠಡಿಗಳ​ನ್ನು ಉದ್ಘಾಟಿಸಿ ಹಾಗೂ ​ಗ್ರಾಮದ ಸರ್ಕಾರಿ​ ಕನ್ನಡ​ ಹಿರಿಯ​ ಪ್ರಾಥಮಿಕ ಶಾಲೆಗೆ ಒಂದು ಹೆಚ್ಚುವರಿ ಕೊಠಡಿ ನಿರ್ಮಾಣದ ಕಾಮಗಾರಿ​ಗೆ ಭೂಮಿ ಪೂಜೆಯನ್ನು ನೆರವೇರಿಸಿ ​ ಅವರು ಮಾತನಾಡುತ್ತಿದ್ದರು.
​ಕ್ಷೇತ್ರದಲ್ಲಿ ನೂರಾರು ಶಾಲೆಗಳಿಗೆ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸುವ ಕಾರ್ಯವನ್ನು ನಾನು ಕಳೆದ 2 ವರ್ಷದಲ್ಲಿ ಕೈಗೆತ್ತಿಕೊಂಡಿದ್ದೇನೆ. ಎಲ್ಲಿಯೂ ಕಟ್ಟಡ ಮತ್ತು ಕೊಠಡಿಯ ಕೊರತೆಯಾಗಬಾರದು. ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು. ಈ ದಿಸೆಯಲ್ಲಿ ಗ್ರಾಮಸ್ಥರು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಬೇಕು. ನಿಮ್ಮೊಂದಿಗೆ ನಾನಿರುತ್ತೇನೆ ಎಂದು ಹೆಬ್ಬಾಳಕರ್ ಅಭಯ ನೀಡಿದರು.​
ಈ ಸಂದರ್ಭದಲ್ಲಿ ಗ್ರಾಮದ​ ಹಿರಿಯರು, ಕ್ಷೇತ್ರ ಶಿಕ್ಷಣಾಧಿಕಾರಿ ಜುಟ್ಟನವರ, ಇಂಜಿನಿಯರ್ ಜಾಧವ್, ಯುವರಾಜ​ ಕದಂ, ಸ್ಥಳೀಯ ಜನ ಪ್ರತಿನಿಧಿಗಳು, ಶಾಲಾ ಸಿಬ್ಬಂದಿಯ ವರ್ಗದವರು, ಕಾರ್ಯಕರ್ತರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ ಭವನದಲ್ಲಿ ಆಯೋಜಿಸಲಾದ “ಬಿಲ್ಡ್ ಟೆಕ್ – 2025” ಕಟ್ಟಡ ನಿರ್ಮಾಣ

Spread the love ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ