Breaking News

ಕೈಕೊಟ್ಟ ಮತಯಂತ್ರಗಳು 9 ಮತಗಟ್ಟೆಗಳಲ್ಲಿ ಮತದಾನ ಸ್ಥಗಿತ

Spread the love

ಬೆಳಗಾವಿ: ಮತಯಂತ್ರಗಳಲ್ಲಿನ ತಾಂತ್ರಿಕ ದೋಷದಿಂದಾಗಿ ಜಿಲ್ಲೆಯ 9 ಮತಗಟ್ಟೆಗಳಲ್ಲಿ ಮತದಾನ ಪ್ಕ್ರಿಯೆ ಕೆಲ ಕಾಲ ಸ್ಥಗಿತಗೊಂಡು ವ್ಯತ್ಯಯ ಉಂಟಾಯಿತು.

ಕಿತ್ತೂರು ಪಟ್ಟಣ, ದೇವಗಾಂವ, ಮೂಡಲಗಿ ಪಟ್ಟಣ, ಅರಬಾವಿ, ಕಾದ್ರೊಳ್ಳಿ, ನೇಸರಗಿ, ಉಳ್ಳಿಗೇರಿ, ಅಥಣಿ, ಗಳತಗಾ ಗ್ರಾಮಗಳಲ್ಲಿ ಮತಯಂತ್ರಗಳು ಕೈಕೊಟ್ಟ ಕಾರಣ ಮತದಾನ ಕೆಲ ಕಾಲ ಸ್ಥಗಿತಗೊಂಡಿತು.

ಕಿತ್ತೂರು ಪಟ್ಟಣದಲ್ಲಿ ಎರಡೂವರೆ ತಾಸುಗಳ ಕಾಲ ಮತದಾನ ಸ್ಥಗಿತಗೊಂಡಿದ್ದು, ಉಳಿದ ಮತಗಟ್ಟೆಗಳಲ್ಲಿ ಅರ್ಧದಿಂದ ಒಂದು ತಾಸು ಕಾಲ ಮತದಾನ ಪ್ರಕ್ರಿಯೆ ನಿಂತುಹೋಯಿತು.

ಇದರಿಂದಾಗಿ ಉತ್ಸಾಹದಿಂದ ಮತ ಚಲಾಯಿಸಲು ಬಂದಿದ್ತದ ಮತದಾರರು ಮತಗಟ್ಟೆ ಎದುರು ಸರದಿ ಸಾಲಿನಲ್ಲಿ ನಿಂತು ಕಾದು ಸುಸ್ತಾದರು. ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಮತದಾನ ಸುಗಮಗೊಳಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಡಳಿತ ತಿಳಿಸಿದೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ