Breaking News

ಜೋಶಿಮಠದ ಸುರಕ್ಷಿತ ವಲಯದ ಮನೆಗಳಲ್ಲೂ ಬಿರುಕು!

Spread the love

ಜೋಶಿಮಠ: ಉತ್ತರಾಖಂಡದ ಜೋಶಿಮಠದಲ್ಲಿ ಕೆಲವು ತಿಂಗಳ ಹಿಂದೆ ಭಾರೀ ಬಿರುಕುಗಳು ಕಾಣಿಸಿಕೊಂಡು, ಹಲವು ಮನೆಗಳು ಧ್ವಂಸಗೊಂಡಿದ್ದವು. ನೂರಾರು ಮಂದಿ ತಾಪತ್ರಯಕ್ಕೊಳಗಾಗಿದ್ದರು.

ಇದೀಗ ಸುರಕ್ಷಿತ ವಲಯ ಎಂದು ಕರೆಸಿಕೊಂಡಿದ್ದ ಜಾಗಗಳಲ್ಲೂ ಬಿರುಕುಗಳು ಕಂಡು ಬಂದಿರು ವುದರಿಂದ ನಿವಾಸಿಗಳು ಆತಂಕಕ್ಕೊಳ ಗಾಗಿದ್ದಾರೆ.ಸದ್ಯದಲ್ಲೇ ಮುಂಗಾರು ಪ್ರವೇಶವಾಗುವ ಕಾರಣ ಭಾರೀ ಮಳೆಯನ್ನು ನಿರೀಕ್ಷಿಸಲಾಗಿದೆ.

 

ಈ ಹಿಂದೆ ಮಳೆ ಬಿದ್ದಾಗಲೇ ಮನೆಗಳಲ್ಲಿ ದೊಡ್ಡದೊಡ್ಡ ಬಿರುಕುಗಳು ಕಾಣಿಸಿಕೊಂಡಿದ್ದವು. ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟಿದ್ದ ಜ್ಯೋತಿರ್ಮಠದಲ್ಲೂ ಬಿರುಕುಗಳುಂಟಾಗಿದ್ದವು.

ವಿಚಿತ್ರವೆಂದರೆ ಹಳದಿ ವಲಯ (ಯೆಲ್ಲೋ ಜೋನ್‌) ಪರವಾಗಿಲ್ಲ, ಸುರಕ್ಷಿತ ಎನ್ನಲಾಗಿತ್ತು. ಆದರೆ ಈಗ ಇಲ್ಲಿನ ಮನೆಗಳಲ್ಲೂ ಸಣ್ಣಸಣ್ಣ ಬಿರುಕುಗಳು ಕಂಡುಬಂದಿವೆ. ಜೋಶಿಮಠದ ಗಾಂಧಿನಗರ ವ್ಯಾಪ್ತಿಯಲ್ಲಿ ಈ ಮನೆಗಳು ಬರುತ್ತವೆ. ಸದ್ಯ ಅಧಿಕಾರಿಗಳು ಈ ಪ್ರದೇಶವನ್ನು ನಿಗಾದಲ್ಲಿಟ್ಟಿದ್ದು ಸೂಕ್ತ ವ್ಯವಸ್ಥೆಗೆ ಮುಂದಾಗಿದ್ದಾರೆ. ಆದರೆ ಜನ ಮಾತ್ರ ತಮ್ಮ ಮನೆಗಳ ಕಥೆ ಏನಾಗುತ್ತದೋ, ಏನೋ ಆತಂಕದಲ್ಲಿ ದಿನ ದೂಡುತ್ತಿದ್ದಾರೆ.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ