Breaking News

ಮಾಳವಿಕಾ ಆಕರ್ಷಕ ಮುಖಚಹರೆಯನ್ನೇ ಬದಲಾಯಿಸಿಬಿಟ್ಟಿದೆ. ಮೈಗ್ರೇನ್

Spread the love

ಬೆಂಗಳೂರು: ಮನುಷ್ಯನನ್ನು ಕಿತ್ತು ಕಾಡಲು ದೊಡ್ಡ ಕಾಯಿಲೆಗಳೇ ಬೇಕಿಲ್ಲ. ಸಣ್ಣಪುಟ್ಟದೆಂದು ನಿರ್ಲಕ್ಷ್ಯಿಸುವ ನೋವುಗಳೂ ದೊಡ್ಡ ವ್ಯಾಧಿಗಳಾಗಿ ಕಾಡಬಹುದು. ಅದಕ್ಕೆ ನಟಿ ಮಾಳವಿಕಾ ಉದಾಹರಣೆಯಾಗಿದ್ದಾರೆ.

ಕಳೆದ ಹಲವು ದಿನಗಳಿಂದ ವಿಪರೀತವಾದ ಮೈಗ್ರೇನ್ ಮಾಳವಿಕಾ ಅವರನ್ನು ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದೆ. ಇದಕ್ಕೂ ಮುಖ್ಯ ವಿಷಯವೆಂದರೆ ಸದಾ ಅಪ್ಪಟ ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಳ್ಳುವ ಮಾಳವಿಕಾ ಆಕರ್ಷಕ ಮುಖಚಹರೆಯನ್ನೇ ಬದಲಾಯಿಸಿಬಿಟ್ಟಿದೆ.
ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಹೊಂದಿರುವ, ಕಾನೂನು ಪದವೀಧರೆ ಮಾಳವಿಕಾ ಅವರು ಅನೇಕ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಕೆಜಿಎಫ್ ಸಿನೆಮಾ ಅವರಿಗೆ ವಿಶೇಷ ಖ್ಯಾತಿ ತಂದುಕೊಟ್ಟಿದೆ.

ತಮ್ಮ ಈಗಿನ ಫೋಟೊಗಳನ್ನು ಜಾಲತಾಣಗಳಲ್ಲಿ ಶೇರ್ ಮಾಡಿರುವ ಮಾಳವಿಕಾ “ಮೈಗ್ರೇನ್ ನನ್ನು ಯಾರೂ ಲಘುವಾಗಿ ತೆಗೆದುಕೊಳ್ಳಬೇಡಿ. ಪಾನಡೋಲ್‍ಗಳು, ನೆಪ್ರೊಸಿಮ್, ಸಾಂಪ್ರದಾಯಿಕ ಔಷಧ ಇತ್ಯಾದಿಗಳನ್ನು ಪಾಪಿಂಗ್ ಮಾಡುತ್ತಿರಿ. ಮೈಗ್ರೇನ್ ಅಂದರೆ ಕೇವಲ ತಲೆನೋವು ಮಾತ್ರವಲ್ಲ. ಅದನ್ನು ನಿರ್ಲಕ್ಷ್ಯಿಸಿದರೆ ನೀವೂ ನನ್ನ ಹಾಗೆ ಆಸ್ಪತ್ರೆ ಸೇರುತ್ತೀರಿ” ಎಂದು ಎಲ್ಲರಿಗೂ ಜಾಗೃತಿ ಕರೆ ನೀಡಿದ್ದಾರೆ.


Spread the love

About Laxminews 24x7

Check Also

ಪ್ರತಿ ಟನ್ ಕಬ್ಬಿಗೆ​​ ಹೆಚ್ಚುವರಿ 50 ರೂ. ಕೊಡಲು ಸಾಧ್ಯವಿಲ್ಲ: ಸಕ್ಕರೆ ಮಿಲ್ಸ್ ಸಂಘಟನೆ ಅಧ್ಯಕ್ಷ

Spread the loveಬೆಂಗಳೂರು: ಪ್ರತಿ ಟನ್ ಕಬ್ಬಿಗೆ 3,200 ರೂ.‌ ಕೊಡಲು ಮಾತ್ರ ಸಾಧ್ಯ. 3,250 ರೂ. ಕೊಡುವುದು ಸಾಧ್ಯವಿಲ್ಲ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ