ಹಾವೇರಿ : ಜಿಲ್ಲೆಯ ರಾಣೇಬೆನ್ನೂರು ಪಟ್ಟಣದ ಹೊರವಲಯದ ಓಂ ಪಬ್ಲಿಕ್ ಸ್ಕೂಲ್ ಬಳಿ ಅಪ್ರಾಪ್ತ ಬಾಲಕಿಯೊಬ್ಬಳು ಭಾವಿ ಪತಿಯ ಕುತ್ತಿಗೆಗೆ ಚಾಕು ಇರಿದ ಘಟನೆ ಬೆಳಕಿಗೆ ಬಂದಿದೆ.
ಅಪ್ರಾಪ್ತ ಬಾಲಕಿ ಭಾವಿ ಪತಿಗೆ ಪಾರ್ಕ್ಗೆ ಕರೆದು ರೀಲ್ಸ್ ಮಾಡೋಣ ಎಂಬ ನೆಪದಲ್ಲಿ ಕರೆದು, ಶಿಲುಬೆಯಂತೆ ನಿಲ್ಲಿಸಿ ಫೋಟೋ ತೆಗೆಯುವಂತ ನಟಿಸಿ ಭಾವಿ ಪತಿಯ ಕುತ್ತಿಗೆಗೆ ಚಾಕು ಇರಿದ್ದಾಳೆ.
ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಚಾಕು ಇರಿತಕ್ಕೆ ಒಳಗಾದ ಯುವಕ ದೇವೆಂದ್ರಗೌಡ ಎಂದು ಗುರುತಿಸಲಾಗಿದೆ. ಈತ ಹರಪನಹಳ್ಳಿ ತಾಲೂಕಿನಲ್ಲಿ ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದನು.ಪ್ರೀತಿಸಿದ ಯುವತಿಯೇ ಭಾವಿ ಪತಿಯನ್ನು ಕೊಂದ ಘಟನೆಯನ್ನು ಕಂಡು ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಪ್ರಕರಣ ತೀವ್ರಗೊಂಡ ಬೆನ್ನಲ್ಲೆ ಆರೋಪಿ ಯುವತಿಯನ್ನ ಅರೆಸ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.