Breaking News

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ 15 ಸ್ಥಾನಗಳಿಗೆ ಕತ್ತಿ ಸಹೋದರರ ಬೆಂಬಲಿತ ಅಭ್ಯರ್ಥಿಗಳು ಅವಿರೋದವಾಗಿ ಆಯ್ಕೆ

Spread the love

ಬೆಳಗಾವಿ : ಹುಕ್ಕೇರಿ ತಾಲ್ಲೂಕಿನ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ 15 ಸ್ಥಾನಗಳಿಗೆ ಕತ್ತಿ ಸಹೋದರರ ಬೆಂಬಲಿತ ಅಭ್ಯರ್ಥಿಗಳು ಅವಿರೋದವಾಗಿ ಆಯ್ಕೆಯಾಗಿದ್ದಾರೆ. 
ರಾಜಕೀಯ ಜಟಾಪಟಿ ಸಾಕ್ಷಿಯಾಗಿದ್ದ ಹುಕ್ಕೇರಿ ತಾಲ್ಲೂಕು ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆ ಕಳೆದ ಎರಡು ದಶಕದಿಂದ ಕತ್ತಿ ಸಹೋದರರ ತಂಡ ಗೆಲುವು ಸಾಧಿಸುತ್ತಾ ಬಂದಿದೆ. ಈ ಬಾರಿಯೂ ಸಹ ಶಾಸಕ ಉಮೇಶ ಕತ್ತಿ, ಮಾಜಿ ಸಂಸದ ರಮೇಶ ಕತ್ತಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಮಾರ್ಗದರ್ಶನದಲ್ಲಿ  ಅವಿರೋಧ ಆಯ್ಕೆ ಪ್ರಕ್ರಿಯೆ ನಡದಿದೆ.
ಸಾಮಾನ್ಯ ಕ್ಷೇತ್ರದಿಂದ ಮಾಜಿ ಸಂಸದ ರಮೇಶ ಕತ್ತಿ, ಪುತ್ರ ಲವ ಕತ್ತಿ, ಅಶೋಕ ಬಸಪ್ಪಾ‌ ಚಂದಪ್ಪಗೋಳ, ಮಲ್ಹಾರಿಗೌಡ ಪಾಟೀಲ, ಮೊಮ್ಮಗ ಕುನಾಲ ಶಿವಗೌಡ ಪಾಟೀಲ, ಜೋಮಲಿಂಗ ಬಸಪ್ಪಾ ಪಟೊಳಿ, ಕಲಗೌಡ ಪಾಟೀಲ,  ಜಯಗೌಡ ಶಿವಗೌಡ ಪಾಟೀಲ, ಶಶಿರಾಜ ಬಾಪುಗೌಡ ಪಾಟೀಲ, ಬಸಗೌಡ ಪರಪ್ಪ ಮಗೆನ್ನವರ, ರವೀಂದ್ರ ಬಸವಂತ ಹಿಡಕಲ್, ಹಿಂದುಳಿದ ಅ ರ‍್ಗದಿಂದ ಕೆಂಚಪ್ಪಾ ಕೆಂಚಪ್ಪಾ ಬೆಣಚಿನಮರಡಿ, ಹಿಂದುಳಿದ ವ ರ‍್ಗದಿಂದ ವಿಷ್ಣು ಭರಮಾ ರೇಡೆಕರ, ಪ.ಜಾ ಕ್ಷೇತ್ರದಿಂದ ಈರಪ್ಪಾ ರುದ್ರಪ್ಪಾ ಬಂಜಿರಾಮ, ಮಹಿಳಾ ಮೀಸಲು ಕ್ಷೇತ್ರದಿಂದ ಸಂಗೀತಾ ಶಿವರಾಯಿ ದಪ್ಪಾದೂಳಿ, ಶಿವಲೀಲಾ ಲಗಮಣ್ಣಾ ಮಣಗುತ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Spread the love

About Laxminews 24x7

Check Also

ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ

Spread the love ಹುಕ್ಕೇರಿ : ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ ಹುಕ್ಕೇರಿ ನಗರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ