ನವದೆಹಲಿ: ಇಲ್ಲಿನ ಹೋಟೆಲ್‌ನಲ್ಲಿ ತಂಗಿದ್ದ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ಪಡೆಯುತ್ತಿದ್ದ ವೇಳೆ ಪತ್ರಕರ್ತರೊಬ್ಬರ ಮೇಲೆ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಹಲ್ಲೆಗೆ ಯತ್ನಿಸಿದರು. ಇದಕ್ಕೆ ಪತ್ರಕರ್ತರು ಆಕ್ರೋಶವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ ಪತ್ರಕರ್ತರು ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಳ್ಳುತ್ತಿದ್ದರು. ಪತ್ರಕರ್ತರ ಮೊಬೈಲ್ ತನ್ನ ಕುತ್ತಿಗೆಗೆ ತಾಗಿತು ಎಂದು ಕುಪಿತಗೊಂಡ ಬೈರತಿ ಏಕವಚನದಲ್ಲಿ ನಿಂದಿಸಿದರು. ಇದಕ್ಕೆ ಪತ್ರಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ‘ನಿನಗೇನು ತಲೆ ಸರಿ ಇಲ್ಲವಾ. ನನ್ನನ್ನು ಏಕೆ ಎಳೆದಾಡುತ್ತಿದ್ದೀಯಾ’ ಎಂದು ಬೈರತಿ ಪ್ರಶ್ನಿಸಿದರು. ಈ ವೇಳೆ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪತ್ರಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ‘ಏಯ್ ಬೈರತಿ ಸುಮ್ಮನಿರಯ್ಯ’ ಎಂದು ಹೇಳಿ ಪರಿಸ್ಥಿತಿಯನ್ನುತಿಳಿಗೊಳಿಸಿದರು.
‘ಮೊಬೈಲ್ ಕುತ್ತಿಗೆಗೆ ತಾಗಿ ಸಿಕ್ಕಾಪಟ್ಟೆ ನೋವಾಯಿತು. ಕಾರ್ಯಕರ್ತರೆಂದು ಭಾವಿಸಿ ಬೈದೆ. ಅವರು ಪತ್ರಕರ್ತರೆಂದು ಗೊತ್ತಿರಲಿಲ್ಲ’ ಎಂದು ಬೈರತಿ ಸಮಜಾಯಿಷಿನೀಡಿದರು
Laxmi News 24×7